ಗುಂಪುಗಳ ನಡುವೆ ಘರ್ಷಣೆ: ಕೋಲು ಮತ್ತು ರಾಡ್‌ಗಳಿಂದ ಹಲ್ಲೆ - ಈಟಿವಿ ಭಾರತ ಕನ್ನಡ
ಸಹರಾನ್‌ಪುರ (ಉತ್ತರಪ್ರದೇಶ ): ಬೈಕ್ಗಳ ನಡುವೆ ಉಂಟಾದ ಅಪಘಾತ ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾದ ಘಟನೆ ಫತೇಪುರ್ನಲ್ಲಿ ನಡೆದಿದೆ. ಎರಡೂ ಗುಂಪುಗಳು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದು, ಪರಸ್ಫರ ಲಾಠಿ, ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಎರಡೂ ಕಡೆಯ ಒಟ್ಟು 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಭಾನುವಾರ ಮಧ್ಯಾಹ್ನ ಫತೇಪುರ್ನ ಮಜ್ರಿ ಗ್ರಾಮದ ನಿವಾಸಿ ಅಂಕಿತ್ ಎಂಬುವವರು ತನ್ನ ಬೈಕ್‌ನಲ್ಲಿ ಖುಜನಾವರ್ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಖುಜನಾವರ್ ಗ್ರಾಮದ ಯುವಕನೊಬ್ಬ ಬೈಕ್‌ನಲ್ಲಿ ಮಜ್ರಿ ಕಡೆಗೆ ಬರುತ್ತಿದ್ದ. ಈ ಸಂದರ್ಭದಲ್ಲಿ ಎರಡೂ ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿದೆ. ಇದೇ ವಿಚಾರವಾಗಿ ಬೈಕ್ ಸವಾರರ ವಾಗ್ವಾದ ನಡೆದಿದೆ ಎಂದು ಫತೇಪುರ್ ಪೊಲೀಸ್ ಠಾಣೆ ಅಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
ಅಪಘಾತದ ಬಗ್ಗೆ ತಿಳಿದ ಇಬ್ಬರ ಕುಟುಂಬಸ್ಥರು ಕೋಲು ರಾಡ್ಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಹೀಗಾಗಿ ಎರಡೂ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಲಾಠಿ, ದೊಣ್ಣೆ ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಮಜ್ರಿ ಗ್ರಾಮದ ನಿವಾಸಿಗಳಾದ ಅಂಕಿತ್, ಶುಭಂ, ರವೀಂದ್ರ, ಮೋಹಿತ್ ಮತ್ತು ವಿಶಾಲ್ ಎಂಬವರು ಗಾಯಗೊಂಡಿದ್ದು, ಇನ್ನೊಂದೆಡೆ ಖುಜನಾವರ್ ನಿವಾಸಿಗಳಾದ ಶರಾಫತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಇದನ್ನೂ ಓದಿ :ಆಂಜನೇಯ ಮೂರ್ತಿ ಎದುರು ದೇಹದಾರ್ಢ್ಯ ಪ್ರದರ್ಶನಕ್ಕೆ ಕಾಂಗ್ರೆಸ್ ಆಕ್ಷೇಪ