ಸಿದ್ದರಾಮಯ್ಯ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದರೆ ಜಮೀನು ಮಾರಿ ಚುನಾವಣೆಗೆ ಹಣ ನೀಡ್ತಾರಂತೆ ಈ ಅಭಿಮಾನಿ! - ಈಟಿವಿ ಭಾರತ್ ಕನ್ನಡ ಸುದ್ದಿ
ವಿಜಯನಗರ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗಾಗಿ ಕೃಷಿ ಜಮೀನು ಮಾರಾಟ ಮಾಡಿ ಕೋಟಿ ರೂಪಾಯಿ ಹಣ ಕೊಡುವುದಾಗಿ ಅಭಿಮಾನಿಯೊಬ್ಬರು ಘೋಷಣೆ ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ತಾಲೂಕಿನ ಗಾದಿಗನೂರು ಗ್ರಾಮದ ಕೆ ಎಸ್ ಮಲಿಯಪ್ಪ ಅವರು ಈ ಘೋಷಣೆ ಮಾಡಿದ್ದಾರೆ. ವಿಜಯನಗರ ಜಿಲ್ಲೆ ಸಾಮಾನ್ಯ ಕ್ಷೇತ್ರ ಹೊಸಪೇಟೆ (ವಿಜಯನಗರ)ಯಿಂದ ಸ್ಪರ್ಧೆ ಮಾಡುವುದಾದರೆ ತಮ್ಮ ಮಾಲೀಕತ್ವದ ಗಾದಿಗನೂರು ಗ್ರಾಮದ ಗೋನಾಳ ಬಳಿ ಇರುವ 6 ಎಕರೆ ಜಮೀನಿನ ಪೈಕಿ ಎರಡು ಎಕರೆ ಮಾರಾಟ ಮಾಡಿ ಅದರಿಂದ ಬರುವ ಅಂದಾಜು 1 ಕೋಟಿ ರೂ. ಗಳನ್ನು ಸಂಗ್ರಹಿಸಿ ಕೊಡುವುದಾಗಿ ಹೇಳಿದ್ದಾರೆ.
ಈಗಾಗಲೇ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದು, ಅವರ ಹಾಲಿ ಕ್ಷೇತ್ರ ಬಾದಾಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಅವರ ಅಭಿಮಾನಿಗಳು ಆಹ್ವಾನ ನೀಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅಭಿಮಾನಿಯೊಬ್ಬರು ತಮ್ಮ ಕೃಷಿ ಜಮೀನು ಮಾರಿ ಚುನಾವಣಾ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ :ರೈಲ್ವೆ ಟ್ರ್ಯಾಕ್ನಲ್ಲಿ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ: ಸಿನಿಮೀಯ ರೀತಿಯಲ್ಲಿ ರಕ್ಷಣೆ!