ಕಲಬುರಗಿ: ಮಳೆಗಾಗಿ ಪ್ರಾರ್ಥಿಸಿ ಗೊಂಬೆಗಳಿಗೆ ಶಾಸ್ತ್ರೋಕ್ತ ಮದುವೆ - ಜೋಡಿ ಗೊಂಬೆಗಳ ಮದುವೆ
ಕಲಬುರಗಿ:ಮುಂಗಾರು ಮಳೆ ಪ್ರಾರಂಭವಾಗಿ ಒಂದು ತಿಂಗಳು ಕಳೆಯುತ್ತಿದೆ. ಆದರೆ ಕಲಬುರಗೆ ಜಿಲ್ಲೆಗೆ ಮಳೆರಾಯ ಕೃಪೆದೋರದೆ ರೈತರು ಕಂಗಾಲಾಗಿದ್ದಾರೆ. ಆಳಂದ ತಾಲೂಕಿನ ಕೊಡಲ ಹಂಗರಗಾ ಗ್ರಾಮದ ಗ್ರಾಮಸ್ಥರು ಹಳ್ಳಿಗಳ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ಜೋಡಿ ಗೊಂಬೆಗಳಿಗೆ ಮದುವೆ ಮಾಡುವ ಮೂಲಕ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೊಡಲ ಹಂಗರಗಾ ಗ್ರಾಮದ ವೀರಭದ್ರೇಶ್ವರ ದೆವಸ್ಥಾನದಲ್ಲಿ ಗ್ರಾಮದ ಮಹಿಳೆಯರು, ಹಿರಿಯರು ಸೇರಿ ಮಾನವರಂತೆ ಚಿಂಚೋಳಿ ಗ್ರಾಮದ ಹೆಣ್ಣು ಗೊಂಬೆ ಹಾಗೂ ಕೊಡಲ ಹಂಗರಗಾ ಗ್ರಾಮದ ಗಂಡು ಗೊಂಬೆಯನ್ನು ಪದ್ದತಿಯಂತೆ ಸುರುಗಿ ಸುತ್ತಿ, ಎಣ್ಣೆ ಹಚ್ಚಿ, ತದನಂತರ ಹೊಸ ಬಟ್ಟೆ ತೊಡಿಸಿ ಮದುವೆ ಮಾಡಿಸಿದ್ದಾರೆ. ಮದುವೆಯ ನಂತರ ಊಟ ಮುಗಿಸಿ ನಾಳೆ ಅಥವಾ ನಾಡಿದ್ದಾದರೂ ಒಳ್ಳೆಯ ಮಳೆ ಸುರಿಯಲೆಂದು ಬೇಡಿಕೊಂಡರು.
ಇನ್ನೊಂದೆಡೆ, ಉತ್ತರ ಭಾರತದ ವಿವಿಧ ಕಡೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಅಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ಕಟ್ಟಡಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಹಲವು ಕಡೆಗಳಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ಕೈಕೊಟ್ಟ ಮಳೆ: ಗೊಂಬೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ ಜನ