ಕರ್ನಾಟಕ

karnataka

ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ಕಾಂಗ್ರೆಸ್​ ಪ್ರತಿಭಟನೆ

ETV Bharat / videos

ಸಂಸತ್​ ಭದ್ರತಾ ಲೋಪ: ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ಕಾಂಗ್ರೆಸ್​ ಪ್ರತಿಭಟನೆ

By ETV Bharat Karnataka Team

Published : Dec 13, 2023, 7:02 PM IST

Updated : Dec 13, 2023, 7:42 PM IST

ಮೈಸೂರು :ಸಂಸದ ಪ್ರತಾಪ್ ಸಿಂಹ ಅವರ ಪಾಸ್​ ಪಡೆದು ಸಂಸತ್​ ಭವನಕ್ಕೆ ನುಗ್ಗಿದ ಪ್ರಕರಣ ವಿಚಾರವಾಗಿ ಪ್ರತಾಪ್ ಸಿಂಹ ಅವರ ಕಚೇರಿ ಎದುರು ಆಗ್ರಹಿಸಿ ಮೈಸೂರು ಜಿಲ್ಲಾ ಹಾಗೂ ಮೈಸೂರು ನಗರ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

ಮೈಸೂರಿನ ಜಲದರ್ಶಿನಿ ಮುಂಭಾಗ ಇರುವ ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ಕಾಂಗ್ರೆಸ್​ ಕಾರ್ಯಕರ್ತರು ಸೇರಿ ಏಕಾಏಕಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ, ಪ್ರತಿಭಟನಕಾರರನ್ನ ಪೊಲೀಸರು ತಡೆದರು. ಆದರೂ ಕಾಂಪೌಂಡ್ ಹಾರಿ ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದೇ ವೇಳೆ, ಕೆಲ ಕಾರ್ಯಕರ್ತರು ಮೈಸೂರು- ಮಡಿಕೇರಿ ರಸ್ತೆ ಮಧ್ಯೆ ಮಲಗಿ ಪ್ರತಿಭಟನೆ ನಡೆಸಿದರು. ಪೊಲೀಸರು ಮನವೊಲಿಸಲು ಯತ್ನಿಸಿದ್ದು, ಪ್ರಯತ್ನ ಫಲನೀಡದ ಕಾರಣ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಜಲದರ್ಶಿನಿ ಅತಿಥಿ ಗೃಹದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವೀಕ್ಷಕರ ಪಾಸ್​ ಪಡೆದ ಇಬ್ಬರು ಇಂದು ಲೋಕಸಭೆಗೆ ನುಗ್ಗಿ ಹಂಗಾಮ ಸೃಷ್ಟಿಸಿದ್ದರು. ಹೀಗೆ ಸದನಕ್ಕೆ ನುಗ್ಗಿದವರನ್ನು ಮನೋರಂಜನ್ ಹಾಗೂ ಸಾಗರ್​ ಶರ್ಮಾ ಎಂದು ಗುರುತಿಸಲಾಗಿದೆ. ಸಾಗರ್ ಶರ್ಮಾ ಬಳಿಯಿದ್ದ ಸಂದರ್ಶಕರ ಪಾಸ್‌ ಸಹ ಪತ್ತೆಯಾಗಿದೆ. ಇದರಿಂದ ಈತನ ಹೆಸರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ವಿಧಾನಸಭೆಯಲ್ಲಿ ಮಾರ್ದನಿಸಿದ ಪ್ರತಾಪ್​ ಸಿಂಹ ಪಾಸ್​ ವಿಷಯ: ಬಿಜೆಪಿ - ಕಾಂಗ್ರೆಸ್ ಮಧ್ಯೆ ವಾಕ್ಸಮರ

Last Updated : Dec 13, 2023, 7:42 PM IST

ABOUT THE AUTHOR

...view details