Chandrayaan 3 mission: ವಿಜ್ಞಾನಿಗಳ ತಂಡವನ್ನು ಅಭಿನಂದಿಸಿದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ - Chandrayaan 3
ಆಂಧ್ರಪ್ರದೇಶ (ಶ್ರೀಹರಿಕೋಟಾ):"ಚಂದ್ರಯಾನ-3 ಚಂದ್ರನ ಕಡೆಗೆ ತನ್ನ ಪ್ರಯಾಣ ಪ್ರಾರಂಭಿಸಿದೆ. ನಮ್ಮ ಪ್ರೀತಿಯ ಎಲ್ವಿಎಂ -3 ಈಗಾಗಲೇ ಚಂದ್ರಯಾನ-3 ಕ್ರಾಫ್ಟ್ ಅನ್ನು ಭೂಮಿಯ ಸುತ್ತಲೂ ನಿಖರವಾಗಿ ಕಕ್ಷಗೆ ಸೇರಿಸಲಾಗಿದೆ'' ಎಂದು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ತಿಳಿಸಿದರು.
ಆಂಧ್ರಪ್ರದೇಶದ ಸುಳ್ಳೂರುಪೇಟೆಯಲ್ಲಿರುವ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ 3 ಮಿಷನ್ ಉಡಾವಣೆ ಯಶಸ್ವಿ ಹಿನ್ನೆಲೆಯಲ್ಲಿ ಇಸ್ರೋ ಸಂಸ್ಥೆಯಲ್ಲಿ ಶುಕ್ರವಾರ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹಾಗೂ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮತ್ತು ಅವರ ವಿಜ್ಞಾನಿಗಳ ತಂಡವನ್ನು ಅಭಿನಂದಿಸಿ ಸಂತಸ ವ್ಯಕ್ತಪಡಿಸಿದರು.
''ಮುಂದಿನ ದಿನಗಳಲ್ಲಿ ಚಂದ್ರಯಾನ-3 ನೌಕೆಯು ತನ್ನ ದೂರದ ಕಕ್ಷೆಯನ್ನು ಹೆಚ್ಚಿಸುವ ಕುಶಲತೆಯನ್ನು ಮಾಡಲು ಹಾಗೂ ಚಂದ್ರನ ಕಡೆಗೆ ಪ್ರಯಾಣಿಸಲು ನಾವು ಶುಭ ಹಾರೈಸೋಣ. ಎಲ್ವಿಎಂ3- ಮಾರ್ಕ್ 3 ಯಶಸ್ವಿಯಾಗಿ ಲ್ಯಾಂಡರ್ ಮತ್ತು ರೋವರ್ ಹೊತ್ತು ಸಾಗಿರುವ ಘಟಕವನ್ನು ನಿಗದಿಪಡಿಸಿದ ಕಕ್ಷಗೆ ಸೇರಿಸಲಾಗಿದೆ. ಈ ಯೋಜನೆಯಲ್ಲಿ ಯಾವುದೇ ತೊಂದರೆ ಎದುರಾಗಿಲ್ಲ'' ಎಂದರು.
ಚಂದ್ರಯಾನ ಉಡಾವಣಾ ವಾಹಕದಿಂದ ಉಪಗ್ರಹವನ್ನು ಯಶಸ್ವಿಯಾಗಿ ಬೇರ್ಪಟ್ಟಿದೆ. ಉಪಗ್ರಹವು ಚಂದ್ರನತ್ತ ತನ್ನ ಪ್ರಯಾಣ ಆರಂಭಿಸಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಚಂದ್ರಯಾನ ನೌಕೆಯನ್ನು ಕಕ್ಷೆಗೆ ಯಶಸ್ವಿಯಾಗಿ ಉಡಾವಣೆಯಾದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ವಿಜ್ಞಾನಿಗಳು ಸಂಭ್ರಮಿಸಿದರು.
ಈ ರಾಕೆಟ್ ಜೊತೆಗೆ 36 ಉಪಗ್ರಹಗಳನ್ನು ನಭಕ್ಕೆ ಹಾರಿಸಲಾಗಿದೆ. 9 ಹಂತಗಳ್ಲಲಿ 16 ಉಪಗ್ರಹಗಳನ್ನು ಈಗಾಗಲೇ ಸಿಗ್ನಲ್ ನೀಡಲು ಪ್ರಾರಂಭಿಸಿವೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ:Chandrayaan 3 mission: ಯಶಸ್ವಿಯಾಗಿ ನಭಕ್ಕೆ ಜಿಗಿದ ಬಾಹುಬಲಿ.. ಚಂದ್ರನತ್ತ ಪ್ರಯಾಣ ಶುರು ಎಂದ ಇಸ್ರೋ