Watch.. ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ಚಾಮರಾಜನಗರದ ಜನ ಹೇಳಿದ್ದೇನು? - etv bharat kannda
ಚಾಮರಾಜನಗರ: ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾವಾರು ಬಜೆಟ್ ಗಮನಿಸಿದರೇ ಚಾಮರಾಜನಗರ ಜಿಲ್ಲೆಗೆ ಹೇಳಿಕೊಳ್ಳುವ ಯೋಜನೆಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿಲ್ಲ. ಆದರೆ, ಸರ್ಕಾರದ ಬೇರೆ ಬೇರೆ ಯೋಜನೆಗಳಿಂದ ಜಿಲ್ಲೆಗೆ ಅನುದಾನ ಹರಿದು ಬರಲಿದೆ. ಎಪಿಎಂಸಿ ಕಾಯ್ದೆ ರದ್ದಾಗಿದ್ದಕ್ಕೆ ಸ್ವಾಗತ ಕೋರಿರುವ ರೈತ ಮುಖಂಡರು ರೈತರಿಗೆ ವಿಮೆ, ಕೋಲ್ಡ್ ಸ್ಟೋರೆಜ್ ಮಾಡಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಕಾವಲು ಸಮಿತಿಗೆ ಅನುದಾನ ನೀಡದೇ ಮರಾಠಿ ನಿಗಮಕ್ಕೆ ಹಣ ಕೊಟ್ಟಿರುವುದಕ್ಕೆ ಕನ್ನಡಪರ ಹೋರಾಟಗಾರರು ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದ ಕೆಲವರಿಗೆ ಈ ಬಜೆಟ್ ನಿರಾಶೆ ತರಿಸಿದೆ. ವರ್ಷಪೂರ್ತಿ ಪೌಷ್ಠಿಕ ಆಹಾರ ನೀಡಿರುವುದು ಜಿಲ್ಲೆಯಲ್ಲಿನ ಸೋಲಿಗ ಸಮುದಾಯಕ್ಕೆ ಸಹಾಯವಾಗಲಿದೆ. ಬದನಗುಪ್ಪೆ ಕೈಗಾರಿಕಾ ಪ್ರದೇಶವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ಚಾಮರಾಜನಗರದ ಕನ್ನಡಪರ ಹೋರಾಟಗಾರ ಶ್ರೀನಿವಾಸಗೌಡ, ಕಬ್ಬುಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ರೈತ ಮುಖಂಡ ನಾಗರಾಜು, ಉಪ್ಪಾರ ಸಮುದಾಯದ ಮುಖಂಡ ಜಯಕುಮಾರ್ ತಮ್ಮ ಅಭಿಪ್ರಾಯವನ್ನು "ಈಟಿವಿ ಭಾರತ್" ಜೊತೆಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಸಿದ್ದು ಮಂಡಿಸಿದ್ದು ರಿವರ್ಸ್ ಗೇರ್ ಬಜೆಟ್, ಜನವಿರೋಧಿ ಎಂದ ಬಸವರಾಜ ಬೊಮ್ಮಾಯಿ..!