ಬೆಳಗಾವಿಯಲ್ಲಿ ಕಾರು ಡಿಕ್ಕಿಯಾಗಿ ಸ್ಕೂಟಿ ಮೇಲಿಂದ ಹಾರಿಬಿದ್ದ ಯುವತಿ; ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಯುವತಿ ಗಂಭೀರ
Published : Jan 2, 2024, 3:37 PM IST
|Updated : Jan 2, 2024, 5:02 PM IST
ಬೆಳಗಾವಿ :ವೇಗವಾಗಿ ಬಂದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಮಜಗಾವಿ - ಪೀರನವಾಡಿ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿ ಸುಮಾರು 50 ಮೀಟರ್ ಎತ್ತರಕ್ಕೆ ಹಾರಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ಗಾಯಾಳುವನ್ನು ಬೆಳಗಾವಿಯ ಬ್ರಹ್ಮನಗರ ನಿವಾಸಿ ದಿವ್ಯಾ ಸುಜಯ್ ಪಾಟೀಲ(23) ಎಂದು ಗುರುತಿಸಲಾಗಿದೆ. ಗಾಯಾಳು ದಿವ್ಯಾ ಅವರನ್ನು ಸಾರ್ವಜನಿಕರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿ ಮಜಗಾವಿ - ಪೀರನವಾಡಿ ರಸ್ತೆಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಪುಡಿ ಪುಡಿಯಾಗಿದ್ದು, ಇತರ ಎರಡು ಕಾರುಗಳಿಗೂ ಡಿಕ್ಕಿಯಾಗಿದೆ. ಈ ಸರಣಿ ಅಪಘಾತದ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಬೆಳಗಾವಿ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಬೆಳಗಾವಿ: ಪ್ರೀತಿ ವಿಚಾರಕ್ಕೆ ಗಲಾಟೆ ಕಲ್ಲು ತೂರಾಟ ಪ್ರಕರಣ: ಸಂತ್ರಸ್ತರ ಮನೆಗೆ ಹೆಬ್ಬಾಳ್ಕರ್ ಭೇಟಿ