ಚಿಕ್ಕಮಗಳೂರು: ಸಿಟಿ ರವಿ ಫ್ಲೆಕ್ಸ್ ಹರಿದ ಮಹಿಳೆ; ಸಿಸಿಟಿವಿ ದೃಶ್ಯ
ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಫ್ಲೆಕ್ಸ್ ಅನ್ನು ಮಹಿಳೆಯೊಬ್ಬರು ಕೋಲಿನಿಂದ ಹರಿದಿರುವ ಘಟನೆ ಜಿಲ್ಲೆಯ ಹನುಮಂತ ವೃತ್ತದ ಬಳಿ ನಡೆದಿದೆ. ರಾಜ್ಯ ಯುವಜನೋತ್ಸವ ಕಾರ್ಯಕ್ರಮಕ್ಕೆಂದು ಫ್ಲೆಕ್ಸ್ ಅಳವಡಿಸಲಾಗಿತ್ತು. ಸಿ ಟಿ ರವಿ, ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಸೇರಿದಂತೆ ಹಲವು ಮುಖಂಡರ ಭಾವಚಿತ್ರ ಹೊಂದಿದ್ದ ಈ ಫ್ಲೆಕ್ಸ್ ಅನ್ನು ಹರಿದು ಹಾಕಲಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಉಮಾ ಪ್ರಶಾಂತ್, ಮೇಲ್ನೋಟಕ್ಕೆ ಮಹಿಳೆ ಮಾನಸಿಕ ಅಸ್ವಸ್ಥರಿರಬಹುದು ಎಂದು ತಿಳಿದುಬಂದಿದೆ. ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದೇವೆ ಎಂದರು. ನಾಳೆಯಿಂದ ಎರಡು ದಿನಗಳ ಕಾಲ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.
Last Updated : Feb 3, 2023, 8:36 PM IST