ಕರ್ನಾಟಕ

karnataka

ಕುಟುಂಬ ಸಮೇತರಾಗಿ ಹುಚ್ಚರಾಯ ಸ್ವಾಮಿಯ ದರ್ಶನ ಪಡೆದ ಯಡಿಯೂರಪ್ಪ- ವಿಡಿಯೋ

ETV Bharat / videos

ಕುಟುಂಬ ಸಮೇತರಾಗಿ ಹುಚ್ಚರಾಯ ಸ್ವಾಮಿಯ ದರ್ಶನ ಪಡೆದ ಯಡಿಯೂರಪ್ಪ- ವಿಡಿಯೋ - ಈಟಿವಿ ಭಾರತ ಕನ್ನಡ

By ETV Bharat Karnataka Team

Published : Oct 14, 2023, 7:50 PM IST

ಶಿವಮೊಗ್ಗ: ಇಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳ ಜೊತೆ ತಮ್ಮ ಆರಾಧ್ಯ ಧೈವ ಹುಚ್ಚರಾಯ ಸ್ವಾಮಿಯ ದರ್ಶನ ಪಡೆದರು. ನಿನ್ನೆಯಿಂದ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಬಿಎಸ್​ವೈ ಇಂದು ಶಿಕಾರಿಪುರದ ತಮ್ಮ ನಿವಾಸದಿಂದ ಹುಚ್ಚರಾಯ ದೇವಾಲಯಕ್ಕೆ ತೆರಳಿದರು. ಈ ವೇಳೆ ಅವರ ಪುತ್ರ, ಸಂಸದ ಬಿ ವೈ ರಾಘವೇಂದ್ರ, ಅವರ ಪತ್ನಿ ಹಾಗೂ ಮಕ್ಕಳು ಜೊತೆಗಿದ್ದರು. 

ಯಡಿಯೂರಪ್ಪ ಕುಟುಂಬ ಸಮೇತರಾಗಿ ದೇವಾಯಲಕ್ಕೆ ಭೇಟಿ ನೀಡಿದ ವೇಳೆ, ಹುಚ್ಚರಾಯ ದೇವರಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಬಿಎಸ್​ವೈ ಕುಟುಂಬಸ್ಥರೆಲ್ಲರ ಹೆಸರಿನಲ್ಲಿ ಅರ್ಚನೆ ಕೂಡ ನಡೆಸಲಾಯಿತು. ಬಳಿಕ ಅರ್ಚಕರು ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಪ್ರಸಾದ ಸ್ವೀಕರಿಸಿದರು.   

ಬಿಎಸ್​ವೈ ಕುಟುಂಬ ಹುಚ್ಚರಾಯ ಸ್ವಾಮಿ ದೇವರ ದರ್ಶನ ಪಡೆದ ಬಳಿಕ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ, ರಾಯರ ದರ್ಶನ ಪಡೆದುಕೊಂಡರು. ಇಂದು ಮಹಾಲಯ ಅಮಾವಾಸೆಯಾಗಿದ್ದು, ಯಡಿಯೂರಪ್ಪ ತಮ್ಮ ಕುಟುಂಬ ಸಮೇತ ದರ್ಶನ ಪಡೆದಿದ್ದು ವಿಶೇಷವಾಗಿತ್ತು. ಬಿಎಸ್​ವೈ ಶಿಕಾರಿಪುರದಿಂದ ಹೊರಡುವಾಗ ಹಾಗೂ ಶಿಕಾರಿಪುರಕ್ಕೆ ವಾಪಸಾಗುವಾಗ ಹುಚ್ಚರಾಯ ಸ್ವಾಮಿ ಹಾಗೂ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದು ವಾಡಿಕೆ ಮಾಡಿಕೊಂಡಿದ್ದಾರೆ.  

ಇದನ್ನೂ ಓದಿ:ರಾಮನಗರ: ಪೌರಕಾರ್ಮಿಕರ ಜೊತೆ ಕುಣಿದು ಕುಪ್ಪಳಿಸಿದ ಮಾಗಡಿ ಶಾಸಕ

ABOUT THE AUTHOR

...view details