ಮರಕ್ಕೆ ಬೈಕ್ ಡಿಕ್ಕಿ
ಮರಕ್ಕೆ ಬೈಕ್ ಡಿಕ್ಕಿಯಾಗಿ ಓರ್ವ ಸಾವು, ಮತ್ತೋರ್ವ ಗಂಭೀರ: ಸಿಸಿಟಿವಿ ದೃಶ್ಯ - ರಸ್ತೆ ಅಪಘಾತದ ಸಿಸಿಟಿವಿ ದೃಶ್ಯಗಳು
ಚಿಕ್ಕಮಗಳೂರು:ಬೈಕ್ ಮರಕ್ಕೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಬಾರ್ಲೈನ್ ರಸ್ತೆಯ ಮಂಗಳ ಹೋಟೆಲ್ ಬಳಿ ನಡೆದಿದೆ. ಶ್ರೇಯಸ್ (22) ಮೃತ ಯುವಕ. ವೇಗವಾಗಿ ಬೈಕ್ ಚಾಲನೆ ಮಾಡಿದ್ದು ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ. ಹಿಂಬದಿ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಕೇಸ್: ತಂದೆಯನ್ನು ಭೇಟಿಯಾಗಲು ಹೊರಟಿದ್ದವ ಅಪಘಾತಕ್ಕೆ ಬಲಿ
Last Updated : Feb 14, 2023, 11:34 AM IST