90 ಸಾವಿರ ನಾಣ್ಯಗಳನ್ನೇ ನೀಡಿ ಕನಸಿನ ಸ್ಕೂಟರ್ ಖರೀದಿಸಿದ ವ್ಯಕ್ತಿ: ವಿಡಿಯೋ - ಸ್ಕೂಟರ್ ಖರೀದಿಗೆ ನಾಣ್ಯ ಸಂಗ್ರಹ
ಗುವಾಹಟಿ(ಅಸ್ಸಾಂ):ಸಣ್ಣ ವಹಿವಾಟಿನಲ್ಲಿ ಚಿಲ್ಲರೆ ಸಮಸ್ಯೆ ಸಹಜ. ಆದರೆ, ಇಲ್ಲೊಬ್ಬ ವ್ಯಕ್ತಿ 90 ಸಾವಿರಕ್ಕೂ ಅಧಿಕ ನಾಣ್ಯಗಳನ್ನು ಸಂಗ್ರಹಿಸಿ, ಇದೀಗ ಸ್ಕೂಟರ್ ಖರೀದಿಸಿದ್ದಾರೆ. ಅಸ್ಸೋಂನ ಗುವಾಹಟಿಯಲ್ಲಿ ಗೂಡಂಗಡಿ ನಡೆಸುತ್ತಿರುವ ಎಂಡಿ ಸೈದುಲ್ ಹಕೀ ಹಲವು ವರ್ಷಗಳಿಂದ ನಾಣ್ಯಗಳನ್ನು ಸಂಗ್ರಹಿಸಿದಾತ. ತನ್ನದೇ ಹಣದಲ್ಲಿ ಸ್ಕೂಟರ್ ಖರೀದಿ ಮಾಡಬೇಕು ಎಂಬುದು ಇವರ ಕನಸಾಗಿತ್ತಂತೆ.
ಸೈದುಲ್ ತಮ್ಮ ಕನಸಿನ ಸ್ಕೂಟರ್ಗಾಗಿ 6 ವರ್ಷಗಳಿಂದ ಪ್ರತಿದಿನವೂ 1, 2, 10 ರೂಪಾಯಿ ಮೌಲ್ಯದ ನಾಣ್ಯಗಳನ್ನು ಸಂಗ್ರಹಿಸುತ್ತಾ ಬಂದಿದ್ದಾರೆ. ಇದೀಗ ಉಳಿತಾಯದ ಹಣದಲ್ಲಿ ಹೊಸ ಸ್ಕೂಟರ್ ತಮ್ಮದಾಗಿಸಿಕೊಂಡಿದ್ದಾರೆ. ಸೈದುಲ್ ಅವರು ಚೀಲದಲ್ಲಿ ಸಂಗ್ರಹಿಸಿದ್ದ ನಾಣ್ಯಗಳ ಸಮೇತ ಬೈಕ್ ಶೋ ರೂಂಗೆ ಬಂದು, ಸ್ಕೂಟರ್ ಖರೀದಿಸುವುದಾಗಿ ಅಲ್ಲಿನ ಸಿಬ್ಬಂದಿಗೆ ತಿಳಿಸಿದ್ದಾರೆ. ಶೋರೂಂನಲ್ಲೇ ನಾಣ್ಯಗಳನ್ನು ಹರಡಿದ ಸಿಬ್ಬಂದಿ ಗಂಟೆಗಟ್ಟಲೆ ಎಣಿಸಿ 90 ಸಾವಿರ ರೂ.ಗೆ ಸ್ಕೂಟರ್ ನೀಡಿದ್ದಾರೆ.
"6 ವರ್ಷಗಳಿಂದ ಸ್ಕೂಟರ್ ಖರೀದಿಗಾಗಿ ನಾಣ್ಯಗಳನ್ನು ಸಂಗ್ರಹಿಸುತ್ತಾ ಬಂದಿದ್ದೆ. ಈಗ ಖರೀದಿಸಿದ್ದು ನನಗೆ ತುಂಬಾ ಸಂತೋಷವಾಗಿದೆ" ಎಂದು ಸೈದುಲ್ ಹೇಳಿದ್ದಾರೆ. ಆದರೆ, ಈ ಇಷ್ಟು ಹಣವನ್ನು ಎಣಿಸುವಷ್ಟಲ್ಲಿ ಬೈಕ್ ಶೋರೂಂ ಸಿಬ್ಬಂದಿ ಸುಸ್ತಾಗಿದ್ದಾರೆ. ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ವಾಹನದ ಕೀಲಿಯನ್ನು ಸೈದುಲ್ಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ:ಕೆಫೆ ಹೊರಗೆ ಯುವಕರಿಂದ ಹನುಮಾನ್ ಚಾಲೀಸಾ ಸ್ತುತಿ: ವಿಡಿಯೋ ನೋಡಿ