ಕರ್ನಾಟಕ

karnataka

ಅಸ್ಸೋಂ ಪ್ರವಾಹ

ETV Bharat / videos

Assam flood: ಅಸ್ಸೋಂನಲ್ಲಿ ಭಾರಿ ಮಳೆ, ಪ್ರವಾಹ: 4 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ- ವಿಡಿಯೋ - NDRF

By

Published : Jun 25, 2023, 12:41 PM IST

ಅಸ್ಸೋಂ:ಭಾರಿ ಮಳೆ, ಪ್ರವಾಹಕ್ಕೆ ತತ್ತರಿಸಿದ ಈಶಾನ್ಯ ದಿಕ್ಕಿನ ಅಸ್ಸೋಂ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ಆದರೆ ಇನ್ನೂ 15 ಜಿಲ್ಲೆಗಳಲ್ಲಿ ಸುಮಾರು 4.01 ಲಕ್ಷ ಜನರು ಬಾಧಿತರಾಗಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ನಲ್ಬರಿ ಜಿಲ್ಲೆಯಲ್ಲಿ ಪ್ರವಾಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಸಂಖ್ಯೆ 3ಕ್ಕೇರಿದೆ. ಬಜಾಲಿ ಜಿಲ್ಲೆಯೊಂದರಲ್ಲೇ ಸುಮಾರು 2.22 ಲಕ್ಷ ಜನ ಸಂತ್ರಸ್ತರಾಗಿದ್ದರೆ, ನಲ್ಬರಿಯಲ್ಲಿ 40,668, ಲಖಿಂಪುರದಲ್ಲಿ 22,060, ದರ್ರಾಂಗ್‌ನಲ್ಲಿ 8,493 ಮತ್ತು ಗೋಲ್ಪಾರಾ ಜಿಲ್ಲೆಯಲ್ಲಿ 4,750 ಜನರು ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರವಾಹ ವರದಿ ತಿಳಿಸಿರುವಂತೆ  4,10,055 ಸಾಕುಪ್ರಾಣಿಗಳು ಸಂಕಷ್ಟದಲ್ಲಿವೆ.  

ಬಜಾಲಿ, ಬಕ್ಸಾ, ಬರ್ಪೇಟಾ, ಚಿರಾಂಗ್, ದರ್ರಾಂಗ್, ಧುಬ್ರಿ, ದಿಬ್ರುಗಢ, ಗೋಲ್‌ಪಾರಾ, ಗೋಲಾಘಾಟ್, ಜೋರ್ಹತ್, ಕಮ್ರೂಪ್, ಲಖಿಂಪುರ, ನಾಗಾಂವ್, ನಲ್ಬರಿ ಮತ್ತು ತಮುಲ್‌ಪುರ ಜಿಲ್ಲೆಗಳ 42 ಕಂದಾಯ ವ್ಯಾಪ್ತಿಯಲ್ಲಿರುವ 1,118 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಎಲ್ಲೆಂದರಲ್ಲಿ ನೀರು ನುಗ್ಗುತ್ತಿದ್ದು ಒಟ್ಟು 8,469.56 ಹೆಕ್ಟೇರ್ ಬೆಳೆ ಪ್ರವಾಹದಲ್ಲಿ ಮುಳುಗಿ ನಾಶವಾಗಿದೆ. ಜೋರ್ಹತ್ ಜಿಲ್ಲೆಯ ನೇಮತಿಘಾಟ್ ಮತ್ತು ಧುಬ್ರಿ, ಮಾನಸ್ ನದಿ, ಪಗ್ಲಾಡಿಯಾ ನದಿ ಮತ್ತು ಪುತಿಮರಿ ನದಿಗಳಲ್ಲಿ ಬ್ರಹ್ಮಪುತ್ರ ನದಿನೀರು ಅಪಾಯದ ಮಟ್ಟ ಮೀರಿದೆ.  

ಜಿಲ್ಲಾಡಳಿತಗಳು 14 ಪ್ರವಾಹಪೀಡಿತ ಜಿಲ್ಲೆಗಳಲ್ಲಿ 101 ಪರಿಹಾರ ಶಿಬಿರಗಳು ಮತ್ತು 119 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಪರಿಹಾರ ಶಿಬಿರಗಳಲ್ಲಿ 81,352 ಜನರು ಆಶ್ರಯ ಪಡೆದಿದ್ದಾರೆ. ಇನ್ನುಳಿದ ಅನೇಕರು ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಎತ್ತರದ ಪ್ರದೇಶಗಳು ಮತ್ತು ಒಡ್ಡುಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. NDRF, SDRF, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ವಿವಿಧ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಭರದ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ:Assam floods: ಭಾರಿ ಪ್ರವಾಹಕ್ಕೆ ಅಸ್ಸಾಂ ತತ್ತರ; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು, ಜನರ ಸ್ಥಳಾಂತರ

ABOUT THE AUTHOR

...view details