ಕನ್ನಂಬಾಡಿಯಲ್ಲೂ ನೀರಿಲ್ಲ- ಕಾಡಲ್ಲೂ ನೀರಿಲ್ಲ: ರಸ್ತೆ ಬದಿ ನಿಂತಿದ್ದ ಹಳ್ಳದ ನೀರು ಕುಡಿದ ಆನೆ! - Elephant Drinking Water
Published : Oct 5, 2023, 1:29 PM IST
ಚಾಮರಾಜನಗರ: ನೀರಿನ ಅಭಾವ ಕೇವಲ ನಾಡಲ್ಲಿ ಮಾತ್ರವಲ್ಲದೇ ಕಾಡಿನಲ್ಲೂ ಕಾಣಿಸಿಕೊಂಡಿದೆ ಎಂಬುದಕ್ಕೆ ರಸ್ತೆ ಬದಿ ಹೊಂಡದಲ್ಲಿ ನಿಂತಿದ್ದ ನೀರು ಕುಡಿದು ದಣಿವಾರಿಸಿಕೊಂಡಿರುವ ಈ ಆನೆಯೇ ಸಾಕ್ಷಿ. ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್ ಕಡೆಗೆ ತೆರಳುವ ರಸ್ತೆಯಲ್ಲಿ ಕಾಡಿನಿಂದ ಹೊರಬಂದ ಆನೆಯೊಂದು ರಸ್ತೆಬದಿ ನಿಂತಿದ್ದ ಹಳ್ಳದ ನೀರನ್ನು ಕುಡಿದು ದಣಿವಾರಿಸಿಕೊಂಡಿದೆ. ಆನೆ ನೀರು ಕುಡಿಯುವುದನ್ನು ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಬೆಟ್ಟದಿಂದ ಇಳಿದು, ನೀರು ಕುಡಿದು ದಣಿವಾರಿಸಿಕೊಂಡು ಮತ್ತೆ ಬೆಟ್ಟ ಹತ್ತಿ ವಾಪಸ್ಸಾಗುತ್ತಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹನೂರು ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆ ಜಮೀನಿನಲ್ಲಿ ಹಾಕಿರುವ ಪೈರುಗಳು ಒಣಗಿ ಹೋಗಿರುವುದು ಒಂದೆಡೆಯಾದರೆ, ಅರಣ್ಯದಲ್ಲಿ ಕೆರೆಕಟ್ಟೆಗಳು ನೀರಿಲ್ಲದೇ ಬತ್ತಿ ಹೋಗಿರುವುದರಿಂದ ವನ್ಯ ಪ್ರಾಣಿಗಳು ಕಾಡಿನಿಂದ ನಾಡಿನತ್ತ ಬರಲು ಪ್ರಾರಂಭಿಸಿವೆ. ಹನೂರು ತಾಲೂಕು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ಈ ಬಾರಿ ಸರಿಯಾಗಿ ಮಳೆಯಾಗದೇ, ಎಲ್ಲೆಡೆ ಈಗಲೇ ನೀರಿನ ಅಭಾವ ತಲೆದೋರಿದೆ.
ಇದನ್ನೂ ನೋಡಿ :ಹಾವೇರಿ: 30 ಕಿಲೋ ಮೀಟರ್ ದೂರ ಬಸ್ನಲ್ಲಿ ಪ್ರಯಾಣಿಸಿದ ಕೋತಿ- ವಿಡಿಯೋ