ವಂಡರ್ಲಾ ಅಮ್ಯೂಸ್ ಮೆಂಟ್ ಪಾರ್ಕ್ನಲ್ಲಿ 4 ಹೊಸ ಗೇಮ್ಗಳಿಗೆ ಚಾಲನೆ ಕೊಟ್ಟ ನಟಿ ಅದಿತಿ ಪ್ರಭುದೇವ - ವಿಡಿಯೋ - WonderLa Amusement Park at Bidadi
ರಾಮನಗರ:ಬಿಡದಿಯಲ್ಲಿರುವ ವಂಡರ್ಲಾ ಅಮ್ಯೂಸ್ ಮೆಂಟ್ ಪಾರ್ಕ್ನಲ್ಲಿ ನಟಿ ಅದಿತಿ ಪ್ರಭುದೇವ ನೂತನವಾಗಿ 4 ಹೊಸ ಗೇಮ್ಗಳಿ ಚಾಲನೆ ನೀಡಿದ್ದಾರೆ. ವಂಡರ್ ಲಾ ರೆಸಾರ್ಟ್ ತನ್ನ ಗ್ರಾಹಕರಿಗಾಗಿ ಇನ್ನಷ್ಟು ಮನರಂಜನೆಯನ್ನು ಹೆಚ್ಚಿಸಲು ವಂಡರ್‌ಲಾ ರೆಸಾರ್ಟ್ ಅನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸಲಾಗುತ್ತಿದೆ. ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ವಂಡರ್‌ಲಾ ಹಾರಡೇನ್‌ನ ಎಂಡಿ ಅರುಣ್ ಕೆ. ಅವರು ಇಂದು ಹೊಸ ಗೇಮ್ಗಳನ್ನು ಉದ್ಘಾಟಿಸಿದರು.
ವಂಡರ್ ಲಾ ರೆಸಾರ್ಟ್‌ನಲ್ಲಿರುವ ಪೂಲ್ ರೋಮಾಂಚಕ ಬಾರ್ ಅವರ ಉನ್ನತ ದರ್ಜೆಯ ಪಾನೀಯಗಳು ಮತ್ತು ಕಾಕ್‌ಟೇಲ್‌ಗಳಿಗೆ ಹೆಸರುವಾಸಿಯಾಗಿದೆ. ವಂಡರ್ಲಾ ರೆಸಾರ್ಟ್ ಕರಿಬಿಯನ್ ವರ್ಟ್ ಅನ್ನು ಪರಿಚಯಿಸುತ್ತಿದ್ದು, ಬೆಂಗಳೂರಿನ ಹೊಸ ವಾಟಲ್ ಸ್ಟಡ್ ರೈಡ್, ಇದು ರೆಸಾರ್ಟ್‌ನ ಒಳಗಡೆಯೇ ಇದೆ. ರೋಮಾಂಚಕ ಸೈಡ್‌ಗಳು, ಫ್ಲ್ಯಾಶ್ ಪ್ಯಾಡ್‌ಗಳು, ವಾಟರ್ ಜೆಟ್‌ಗಳನ್ನು ಒಳಗೊಂಡಿದ್ದು, ಇದು ಎಲ್ಲಾ ವಯಸ್ಸಿನ ಅತಿಥಿಗಳಿಗೆ ಸುರಕ್ಷಿತ ಮತ್ತು ಆನಂದದಾಯಕ ಅನುಭವಗಳನ್ನು ನೀಡುತ್ತದೆ.
ನಟಿ ಅದಿತಿ ಪ್ರಭುದೇವ ಮಾತನಾಡಿ, ನಾನು ವಂಡರ್ ಲಾಗೆ ಬಂದಿರುವುದು ಸಂತಸ ತಂದಿದೆ. ಇಲ್ಲಿ ಜನರಿಗೆ ಒಳ್ಳೆಯ ಮನರಂಜನೆ ಸಿಗಲಿದೆ. ಇವತ್ತಿನ ಕಾರ್ಯಕ್ರಮ ಸಹ ನನಗೆ ಖುಷಿ ತಂದಿದೆ. ಸ್ವಿಮ್ಮಿಂಗ್ ಪೂಲ್ ಪಕ್ಕ ಬಾರ್ ಇರೋದು ಹುಡುಗರಿಗೆ ಖುಷಿಯಾಗುತ್ತೆ. ನಾನು ಎಳನೀರು ಕುಡಿಯೋಳು ಎಂದು ಹೇಳಿದರು.