ಹುಡುಗಿಯರ ಹಾಸ್ಟೆಲ್ಗೆ ನುಗ್ಗಿದ ಖದೀಮ.. ಪರಾರಿಯಾಗುವಾಗ ಬಾವಿಗೆ ಬಿದ್ದು ಫಜೀತಿ - ವಿಡಿಯೋ - ಈಟಿವಿ ಭಾರತ ಕನ್ನಡ
ಹನುಮಕೊಂಡ (ತೆಲಂಗಾಣ) : ಕಾಲೇಜು ಹುಡುಗಿಯರ ಹಾಸ್ಟೆಲ್‌ನಲ್ಲಿ ಸರಣಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಾಗ ಕಳ್ಳತನದ ಆರೋಪಿ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ಬಾವಿಯಲ್ಲಿದ್ದ ಈತನನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಹೊರಕ್ಕೆ ತೆಗೆದಿದ್ದಾರೆ. ಇಲ್ಲಿನ ಹಾಸನಪರ್ತಿ ತಾಲೂಕಿನ ಎಸ್‌ಆರ್ ಇಂಜಿನಿಯರಿಂಗ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ನಲ್ಲಿ ಆರೋಪಿ ಸರಣಿ ಕಳ್ಳತನ ಮಾಡಿದ್ದನಂತೆ. ಹಾಸ್ಟೆಲ್‌ನಲ್ಲಿದ್ದ ಮೊಬೈಲ್ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ಕದ್ದು ರಾತ್ರಿ ಪರಾರಿಯಾಗುತ್ತಿದ್ದ ವೇಳೆ ಬಾವಿಗೆ ಬಿದ್ದಿದ್ದಾನೆ.
ಇನ್ನೊಂದೆಡೆ, ಕಳ್ಳತನ ಆರೋಪಿ ಸ್ನಾನಗೃಹದ ಬಾಗಿಲು ಮುರಿದು ಹಾಸ್ಟೆಲ್ ಪ್ರವೇಶಿದ್ದಕ್ಕೆ ವಿದ್ಯಾರ್ಥಿನಿಯರು ಕಾಲೇಜಿನ ಎದುರು ಧರಣಿ ನಡೆಸಿದರು. ಮೂರು ದಿನದ ಅಂತರದಲ್ಲಿ ಸುಮಾರು 14 ಫೋನ್ ಗಳು ಕಳ್ಳತನವಾಗಿದ್ದರೂ ಆಡಳಿತ ಮಂಡಳಿ ಏನೂ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ನೋಡಿ :ಶನಿ ದೇವರಿಗೆ 1 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಲಶ ಅರ್ಪಿಸಿದ ಭಕ್ತ