ಸಂಕ್ರಾಂತಿಗೆ ಮನೆಗೆ ಬಂದ ಅಳಿಯನಿಗೆ 173 ಬಗೆಯ ಖಾದ್ಯಗಳ ಭೂರಿ ಭೋಜನ! - ಪಶ್ಚಿಮ ಗೋದಾವರಿ
ಪಶ್ಚಿಮ ಗೋದಾವರಿ (ಆಂಧ್ರ ಪ್ರದೇಶ): ಅಳಿಯ ಮನೆಗೆ ಬರ್ತಾನೆ ಅಂದ್ರೆ ಕೋಳಿ, ಕುರಿ ಕಡಿದು ಮಟನ್ ಊಟ ಹಾಕಬಹುದು ಅಥವಾ ಒಬ್ಬಟ್ಟು, ಕಾಯಿ ಕಡುಬು ಮಾಡಿ ಸಿಹಿ ಊಟ ಬಡಿಸಬಹುದು. ಆದರೆ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ 173 ಬಗೆಯ ಖಾದ್ಯಗಳೊಂದಿಗೆ ಹೊಸ ಅಳಿಯನಿಗೆ ಅತ್ತೆ, ಚಿಕ್ಕಪ್ಪಂದಿರು ಸೇರಿ ಔತಣ ಬಡಿಸಿದ್ದಾರೆ.! ಉದ್ಯಮಿ ತಟವರ್ತಿ ಬದ್ರಿ ಮತ್ತು ಸಂಧ್ಯಾ ತಮ್ಮ ಮಗಳು ಹರಿಕಾ ಅವರನ್ನು ಇತ್ತೀಚೆಗೆ ಪೃದ್ವಿ ಗುಪ್ತಾ ಅವರೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಸಂಕ್ರಾಂತಿ ಹಬ್ಬದ ನಿಮಿತ್ತ ಹೊಸ ಅಳಿಯ ಮನೆಗೆ ಬಂದಾಗ ಹೀಗೆ ಇಡೀ ಡೈನಿಂಗ್ ಟೇಬಲ್ ತುಂಬುವಷ್ಟು ಭೂರಿ ಭೋಜನ ಸಿದ್ಧಪಡಿಸಿ ಅಳಿಯನಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.