ಕರ್ನಾಟಕ

karnataka

ಬೃಹತ್ ಕಾಳಿಂಗ ಸರ್ಪ

ETV Bharat / videos

Watch video - ವರ್ಷದಿಂದ 15 ಅಡಿ ಉದ್ದದ ಬಿಲದಲ್ಲಿ ಬೃಹತ್ ಕಾಳಿಂಗ ಸರ್ಪ ವಾಸ.. ಗದ್ದೆಗೆ ಬರಲು ಕಾರ್ಮಿಕರ ಹಿಂದೇಟು: ಕೊನೆಗೂ ಕಾರ್ಯಾಚರಣೆ ಸಕ್ಸಸ್​ - ಬಿಲದಲ್ಲಿ ಕಾಳಿಂಗ ಸರ್ಪ

By

Published : Aug 12, 2023, 8:25 PM IST

ಚಿಕ್ಕಮಗಳೂರು: ಒಂದು ವರ್ಷದಿಂದ ಗದ್ದೆಯಲ್ಲಿ ಮನೆ ಮಾಡಿದ್ದ ಬರೋಬ್ಬರಿ 14 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಉರಗ ತಜ್ಞ ಹರಿಂದ್ರ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕೋಡಿಹಿತ್ಲು ಸಮೀಪದ ಹೊಸೂರು ಗ್ರಾಮದಲ್ಲಿ ಚಿದಂಬರ ಹೆಬ್ಬಾರ್ ಎಂಬುವರ ಗದ್ದೆಯಲ್ಲಿ ಕಳೆದ ಒಂದು ವರ್ಷದಿಂದ ಕಾಳಿಂಗ ಸರ್ಪ ವಾಸವಾಗಿತ್ತು. ಒಂದು ವರ್ಷದಿಂದ ಗದ್ದೆ ಕೃಷಿ ಮಾಡದೆ ಈ ಕೃಷಿಕ ಪಾಳು ಬಿಟ್ಟಿದ್ದರು. ಈ ವರ್ಷ ಕೃಷಿ ಮಾಡಲು ರೈತ ಮುಂದಾಗಿದ್ದ ವೇಳೆ ಈ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ಕೃಷಿ ಕೆಲಸದ ವೇಳೆ ಆಗಾಗ ಕಾಳಿಂಗ ಕಾಣಿಸಿಕೊಂಡಿದ್ದರಿಂದ ಆತಂಕ ಮನೆ ಮಾಡಿತ್ತು. ಇದರಿಂದ ಗದ್ದೆಗೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದರು. 

15 ಅಡಿಗೂ ಉದ್ದದ ಬಿಲದಲ್ಲೇ ಕಾಳಿಂಗ ಮನೆ:15 ಅಡಿಗೂ ಉದ್ದದ ಬಿಲದಲ್ಲಿ ಕಾಳಿಂಗ ಸರ್ಪ ವರ್ಷದಿಂದ ವಾಸವಾಗಿತ್ತು. ಗದ್ದೆ ಮಾಲೀಕರು ಉರಗ ತಜ್ಞ ಹರಿಂದ್ರಗೆ ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿದ್ದರು. ಆ ಬಳಿಕ ಸತತ ನಾಲ್ಕು ತಾಸು ಕಾರ್ಯಾಚರಣೆ ಮಾಡಿ ಕಾಳಿಂಗ ಸರ್ಪವನ್ನು ಉರಗ ತಜ್ಞ ಸೆರೆ ಹಿಡಿದಿದ್ದಾರೆ. ನಂತರ ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಕೊಪ್ಪ ಹೊರ ವಲಯದ ಅರಣ್ಯಕ್ಕೆ ಕಾಳಿಂಗ ಸರ್ಪವನ್ನು ಬಿಡಲಾಗಿದೆ. ಗದ್ದೆಯ ಮಾಲೀಕ, ಕಾರ್ಮಿಕರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ, ಹೆಬ್ಬಾವು ಸೆರೆ

ABOUT THE AUTHOR

...view details