ಉಕ್ರೇನ್ನಿಂದ ಸುರಕ್ಷಿತವಾಗಿ ಬಂದಿಳಿದ ಕೊಡಗಿನ ಕುವರಿ ಅಕ್ಷಿತಾ - ukraine russia conflict
ಕೊಡಗು: ಉಕ್ರೇನ್ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದ ಕೊಡಗಿನ ವಿದ್ಯಾರ್ಥಿನಿ ಸುರಕ್ಷಿತವಾಗಿ ಆಗಮಿಸಿದ್ದಾರೆ. ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದ ಅಕ್ಷಿತಾ ಅಕ್ಕಮ್ಮ ತಾಯ್ನಾಡಿಗೆ ವಾಪ್ಪಸಾಗಿದ್ದಾರೆ. ಐಮುಡಿಯಂಡ ರಮೇಶ್ರ ಪುತ್ರಿ ಅಕ್ಷಿತಾ ಅಕ್ಕಮ್ಮ ಕಾರ್ಖೀವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿದ್ದರು. ಸುರಕ್ಷಿತವಾಗಿ ಮನೆಗೆ ತಲುಪಿದ್ದಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು. ಅಕ್ಷಿತಾ ಮಾತನಾಡಿ, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಆಗಾಗ್ಗೆ ಕರೆ ಮಾಡಿ ವಿಚಾರಿಸುತ್ತಿದ್ದರು. ಉಕ್ರೇನ್ನಿಂದ ಮನೆ ತಲುಪುವವರೆಗೂ ಸಂಪರ್ಕದಲ್ಲೇ ಇದ್ದು, ಧೈರ್ಯ ತುಂಬುತ್ತಿದ್ದರು ಎಂದು ಹೇಳಿದರು.
Last Updated : Feb 3, 2023, 8:18 PM IST