ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ: ಅಮೆರಿಕ ಅಧ್ಯಕ್ಷ ಜೋ ಬೈಡನ್ - ಆಫ್ಘಾನ್ ಬಿಕ್ಕಟ್ಟು
ಅಫ್ಘಾನಿಸ್ತಾನದಲ್ಲಿ ರಾಷ್ಟ್ರ ಕಟ್ಟುವ ಅಥವಾ ಏಕೀಕೃತ, ಕೇಂದ್ರೀಕೃತ ಪ್ರಜಾಪ್ರಭುತ್ವವನ್ನು ಸೃಷ್ಟಿಸುವುದು ನಮ್ಮ ಧ್ಯೇಯವಲ್ಲ. ಭಯೋತ್ಪಾದನೆಯನ್ನು ಮೂಲೋತ್ಫಾಟನೆ ಮಾಡುವುದೇ ನಮ್ಮ ಉದ್ದೇಶ ಎಂದು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಅಲ್ ಖೈದಾ ಉಗ್ರರು ಮತ್ತೆಂದೂ ಅಫ್ಘಾನಿಸ್ತಾನದ ನೆಲವನ್ನು ಅಮೆರಿಕದ ವಿರುದ್ಧದ ದಾಳಿಗೆ ಬಳಸದಂತೆ ತಡೆಯುವುದು ನಮ್ಮ ಆದ್ಯತೆಯಾಗಿತ್ತು ಎಂದು ವಿಶ್ವ ವಾಣಿಜ್ಯ ಸಂಸ್ಥೆಯ ದಾಳಿಯನ್ನು ಉಲ್ಲೇಖಿಸಿ ಅವರು ಹೇಳಿದರು. ಹಾಗಾಗಿ, ಅಫ್ಘಾನಿಸ್ತಾನದಿಂದ ಅಮೆರಿಕದ ಸೇನೆಯನ್ನು ವಾಪಸ್ ತೆಗೆದುಕೊಳ್ಳುವ ನಿರ್ಧಾರವನ್ನು ಬೈಡನ್ ಸಮರ್ಥಿಸಿಕೊಂಡರು.