ಪ್ರಕಾಶ್ ರೈ 'ಅಪ್ಪು ಆ್ಯಂಬುಲೆನ್ಸ್ ಸೇವೆ'ಗೆ ಯಶ್ ಸಾಥ್ - prakash rai appu ambulance service
ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್ ಶುಕ್ರವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ವೇದಿಕೆಯಲ್ಲಿ ಅಪ್ಪು ಮತ್ತು ಗಂಧದ ಗುಡಿ ಬಗ್ಗೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಅಪ್ಪು ಹೆಸರಿನ ಆ್ಯಂಬುಲೆನ್ಸ್ ರಾಜ್ಯದಲ್ಲಿ ಓಡಾಡಬೇಕು ಎಂಬ ಬಹುಭಾಷಾ ನಟ ಪ್ರಕಾಶ್ ರೈ ಸೇವೆಗೆ ಕೈ ಜೋಡಿಸುವುದಾಗಿ ಹೇಳಿದರು. ನನ್ನ ಯಶೋಮಾರ್ಗ ಮತ್ತು ಕೆವಿಎನ್ ಫೌಂಡೇಶನ್ ಸೇರಿ ಮಿಕ್ಕ ಆ್ಯಂಬುಲೆನ್ಸ್ಗಳನ್ನು ಪೂರೈಸುವ ಕೆಲಸ ಮಾಡುತ್ತೇವೆ. ತಕ್ಷಣವೇ ಆ ಆ್ಯಂಬುಲೆನ್ಸ್ ಕನಸು ನನಸಾಗಬೇಕು. ಬಾಕಿ 25 ಜಿಲ್ಲೆಗಳಿಗೆ ಆ್ಯಂಬುಲೆನ್ಸ್ ಆಗಬೇಕಾ, ಅಪ್ಪು ಒಂದು ಶಕ್ತಿ, ಅವರೇ ಆ 25 ಜಿಲ್ಲೆಗಳಿಗೂ ಆ್ಯಂಬುಲೆನ್ಸ್ ಮಾಡಿಸಿಕೊಳ್ಳುತ್ತಾರೆ ಎಂದು ನಟ ಯಶ್ ತಿಳಿಸಿದರು.
Last Updated : Feb 3, 2023, 8:29 PM IST