ನಮ್ಮದು ತತ್ವ ಸಿದ್ಧಾಂತದ ಪಕ್ಷ, ರಮೇಶ್ ಜಾರಕಿಹೊಳಿ ಹೇಳಿಕೆ ವೈಯಕ್ತಿಕ : ಗೋವಿಂದ ಕಾರಜೋಳ - ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ
ಚಿಕ್ಕೋಡಿ(ಬೆಳಗಾವಿ): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಏನಾದ್ರೂ ಹೇಳಿಕೆಕೊಟ್ಟಿದ್ರೆ ಅದು ಅವರ ವೈಯಕ್ತಿಕ ವಿಚಾರ ಆಗುತ್ತದೆ ಎಂದು ಚಿಕ್ಕೋಡಿಯಲ್ಲಿ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಸುಳೇಭಾವಿಯಲ್ಲಿ ರಮೇಶ ಜಾರಕಿಹೊಳಿ ಒಂದು ಮತಕ್ಕೆ ಆರು ಸಾವಿರ ಎಂದು ಏನಾದ್ರೂ ಹೇಳಿಕೆಕೊಟ್ಟಿದ್ರೆ, ಅದು ಅವರ ವೈಯಕ್ತಿಕ ಹೇಳಿಕೆ ಆಗುತ್ತದೆ. ನಮ್ಮ ಪಕ್ಷದಲ್ಲಿ ಅಂತಹ ವ್ಯವಸ್ಥೆಗೆ ಅವಕಾಶವಿಲ್ಲ. ನಮ್ಮದು ತತ್ವ, ಸಿದ್ಧಾಂತಗಳಿರುವ ಪಕ್ಷ. ನಮ್ಮ ಪಕ್ಷಕ್ಕೆ ಮೌಲ್ಯವಿರುವುದರಿಂದ ಇಡೀ ದೇಶದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ. 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ದೇಶಾದ್ಯಂತ ಅಧಿಕಾರಕ್ಕೆ ಬರಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂಓದಿ:3 ವರ್ಷ 5 ತಿಂಗಳ ಬಾಲಕಿ ಈಕೆ: ಮುಳ್ಳಯ್ಯನಗಿರಿ ಏರಿ ಮತ್ತೊಂದು ದಾಖಲೆ!