'ಮನ್ ಕಿ ಬಾತ್' ಭಾರತೀಯರ ಮೇಲೆ ದೊಡ್ಡ ಪ್ರಭಾವ ಬೀರಿದೆ: ನಟ ಅಮೀರ್ ಖಾನ್ - Aamir Khan opinion on Mann Ki Baat
ನವದೆಹಲಿ: 'ಮನ್ ಕಿ ಬಾತ್' ಒಂದು ಮಾಸಿಕ ಕಾರ್ಯಕ್ರಮ. ವರ್ಷದ ಪ್ರತೀ ತಿಂಗಳ ಕೊನೆ ಭಾನುವಾರದಂದು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುತ್ತದೆ. ಈ 'ಮನ್ ಕಿ ಬಾತ್' ಮೂಲಕ ದೇಶದ ಪ್ರಧಾನಿ ನರೇದ್ರ ಮೋದಿ ಅವರು ಪ್ರಜೆಗಳೊಂದಿಗೆ ಮಾತುಕತೆ ನಡೆಸುತ್ತಾರೆ. ಈ ಕಾರ್ಯಕ್ರಮ ದೊಡ್ಡ ಸಂಖ್ಯೆಯ ಕೇಳುಗರನ್ನು ಹೊಂದಿದ್ದು, ಇದೀಗ ಬಾಲಿವುಡ್ ಹಿರಿಯ, ಬಹುಬೇಡಿಕೆ ನಟ ಅಮೀರ್ ಖಾನ್ ಮಾತನಾಡಿದ್ದಾರೆ.
ನವದೆಹಲಿಯಲ್ಲಿ ನಡೆದ "ಮನ್ ಕಿ ಬಾತ್ @100" ರಾಷ್ಟ್ರೀಯ ಸಮಾವೇಶದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಭಾಗಿ ಆಗಿದ್ದರು. ಪಿಎಂ ಮೋದಿ ಅವರ 'ಮನ್ ಕಿ ಬಾತ್' ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮನ್ ಕಿ ಬಾತ್ ಭಾರತದ ಜನರ ಮೇಲೆ ಭಾರಿ ಪ್ರಭಾವ ಬೀರಿದೆ, ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಜೂ.ಎನ್ಟಿಆರ್ ಜೊತೆ ಕೆಲಸ ಮಾಡಲಿಚ್ಛಿಸಿದ ಹಾಲಿವುಡ್ ನಿರ್ದೇಶಕ
'ಮನ್ ಕಿ ಬಾತ್' ಕಾರ್ಯಕ್ರಮದ 100ನೇ ಸಂಚಿಕೆ ಇದೇ ಏಪ್ರಿಲ್ 30ರಂದು ಪ್ರಸಾರವಾಗಲಿದೆ. ಈಗಾಗಲೇ 99 ಯಶಸ್ವಿ ಕಾರ್ಯಕ್ರಮ ನಡೆದಿದೆ. 100ನೇ ಸಂಚಿಕೆಗೆ ಈಗಾಗಲೇ ವಿಶೇಷ ಸಿದ್ಧತೆಗಳು ನಡೆದಿದೆ.