ಪರಿಸರ ಉಳಿಸುವ ಜೊತೆ ಹಣ ಗಳಿಸಿ... ಹೇಗೆ ಅಂತಾ ಈ ವಿದ್ಯಾರ್ಥಿಗಳು ಹೇಳ್ತಾರೆ ಕೇಳಿ!
ಬೆಂಗಳೂರು: ಹಳ್ಳಿಯಿಂದ ನಗರದವರೆಗೂ ಪರಿಸರ ಕಲುಷಿತವಾಗಿದೆ. ಒಳ್ಳೆಯ ಗಾಳಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಲಿದೆ. ಮುಂದಿನ ದಿನಮಾನಗಳಲ್ಲಿ ಜನರು ಕಲುಷಿತ ಗಾಳಿ, ನೀರು, ಆಹಾರ ಸೇವಿಸುವಂತಾಗುತ್ತದೆ. ಹೀಗಾಗಿ ಇಲ್ಲೊಂದು ವಿದ್ಯಾರ್ಥಿ ತಂಡ ಪರಿಸರ ಉಳಿಸಿ ಜೊತೆ ಜೊತೆಗೆ ಹಣ ಗಳಿಸಿ ಅಂತಾ ಜಾಗೃತಿ ಮೂಡಿಸುತ್ತಿದೆ. ರೈತರು ಬೆಳೆ ಬಂದ ನಂತರ ಬೇಡವೆಂದು ಬಿಸಾಕಿರುವ ತ್ಯಾಜ್ಯದಿಂದ ಜನರಿಗೆ ಉಪಯುಕ್ತವಾಗುವ ವಸ್ತುಗಳನ್ನ ತಯಾರಿಸಿ ಅಂತ ವಿದ್ಯಾರ್ಥಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಈ ಬಗ್ಗೆ ಮಕ್ಕಳು ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.