ಕರ್ನಾಟಕ

karnataka

ETV Bharat / videos

'ಮೆ ಶಾಯರ್​ ತೋ ನಹಿ, ಮಗರ್​ ಯೇ ಹಸಿ..': ಅಪ್ಪು ನೆಚ್ಚಿನ ಹಾಡು ಹಾಡಿದ ಶಿವಣ್ಣ - ಪುನೀತ್​ಗಾಗಿ ಹಾಡಿದ ಶಿವರಾಜ್​ಕುಮಾರ್​

By

Published : Nov 16, 2021, 8:03 PM IST

ಅರಮನೆ ಮೈದಾನದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ. ಪುನೀತ್​ ರಾಜ್​ಕುಮಾರ್ ಅವರಿಗೆ 'ಪುನೀತ್​ ನಮನ' ಹೆಸರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ತಮ್ಮನನ್ನು ನೆನೆದು ಭಾವುಕರಾದ ಶಿವಣ್ಣ, ಅಪ್ಪು ಜೊತೆಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು. ನಾವು ಪಾರ್ಟಿ ಮಾಡುವಾಗ ಹಾಗೆಯೇ ಅಪ್ಪು ಮನೆಗೆ ಬಂದಾಗೆಲ್ಲಾ ಕರೋಕೆ ಆಡ್ತಿದ್ವಿ, ಅದ್ರಲ್ಲಿ ಹಿಂದಿಯ ಬಾಬಿ (Bobby)ಚಿತ್ರದ 'ಮೆ ಶಾಯರ್​ ತೋ ನಹಿ, ಮಗರ್​ ಯೇ ಹಸಿ' ಹಿಂದಿ ಹಾಡಂತೂ ಅವನಿಗೆ ಬಹಳ ಇಷ್ಟ, ಅವನಿಗಾಗಿ ಈ ಹಾಡನ್ನು ಹಾಡ್ತೇನೆ ಎಂದು ಶಿವರಾಜ್​ಕುಮಾರ್ ಪ್ರೀತಿಯ​​ ತಮ್ಮನ ನೆಚ್ಚಿನ ಹಾಡನ್ನು ವೇದಿಕೆಯಲ್ಲಿ ಹಾಡಿದರು. ಶಿವಣ್ಣನ ಮಾತುಗಳು ಹಾಗೂ ಹಾಡು ಕೇಳಿ ನೆರೆದಿದ್ದವರ ಕಣ್ಣಾಲಿಗಳು ತುಂಬಿಬಂದವು.

ABOUT THE AUTHOR

...view details