ಕೊಡಗು ಭೂಕುಸಿತದ ನಂತರದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ.. - ತೋರಾ ಗ್ರಾಮದ ಭೂ ಕುಸಿತದ ನಂತರದ ದೃಶ್ಯಗಳು
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದ ಭೂ ಕುಸಿತದ ನಂತರದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಿಲ್ಲಾಡಳಿತದ ವತಿಯಿಂದ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಮೊದಲು ಸುಂದರ ಪ್ರಕೃತಿಯ ನಡುವೆ ಕಾಫಿ ಹಾಗೂ ಅಡಿಕೆ ಮರಗಳಿಂದ ಆವೃತವಾಗಿದ್ದ ಪ್ರದೇಶದಲ್ಲಿ ಇದೀಗ ಕೆಸರು ಮಣ್ಣು ಕಾಣಿಸ್ತಿದೆ. ಈಗ ಅಲ್ಲಿ ಸ್ಮಶಾನ ಮೌನ ಆವರಿಸಿದೆ.