ಕಸದ ಗಾಡಿ ಚಲಾಯಿಸಿ ಜನರ ಗಮನ ಸೆಳೆದ ಶಾಸಕ ರೇಣುಕಾಚಾರ್ಯ - ಕಸದ ಗಾಡಿ ಚಲಾಯಿಸಿದ ಶಾಸಕ ಎಂಪಿ ರೇಣುಕಾಚಾರ್ಯ
ದಾವಣಗೆರೆ: ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಇದೀಗ ಕಸದ ಗಾಡಿ ಚಲಾಯಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮ ಪಂಚಾಯತ್ನಲ್ಲಿ ನಡೆದ 'ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ' ಕಾರ್ಯಕ್ರಮ ಉದ್ಘಾಟಿಸಿ ನಂತರ ಹೊಸ ಕಸದ ಗಾಡಿಯನ್ನು ಖುದ್ದು ತಾವೇ ಡ್ರೈವಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಅಲ್ಲದೆ ತ್ಯಾಜ್ಯ ವಿಲೇವಾರಿ ಘಟಕದ ಲೋಕಾರ್ಪಣೆ ಕೂಡ ಮಾಡಿದರು.