ಅಲಾಯಿ ಕೊಂಡದಲ್ಲಿ ಜಿಗಿದು ಬೆಂಕಿ ತೂರಿದ್ರು... ವಿಡಿಯೋ
ಬಳ್ಳಾರಿ: ಮೊಹರಂ ಹಬ್ಬದ ಅಂಗವಾಗಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿಯಂಚಿನ ಸುಳುವಾಯಿ ಗ್ರಾಮದಲ್ಲಿ ಮಸೀದಿ ಮುಂದಿನ ಅಲಾಯಿ ಕೊಂಡದಲ್ಲಿ ಮುಲ್ಲಾವೊಬ್ಬರು ಜಿಗಿದು ಬೆಂಕಿ ತೂರಿ ಭಕ್ತಿ ಪ್ರದರ್ಶಿಸಿದರು. ಒಂದೆಡೆ ಪೀರಲ ದೇವರ ಸವಾರಿ ಹೊತ್ತಿರುವ ಸವಾರರೊಬ್ಬರು ದೇವರು ಮೈಮೇಲೆ ಬಂದಂತೆ ನಟಿಸುತ್ತಿರುವಾಗ ಹಸಿರು ಬಣ್ಣದ ಸಮವಸ್ತ್ರ ಧರಿಸಿದ ಮುಲ್ಲಾವೊಬ್ಬರು ಅತ್ಯಂತ ವೇಗವಾಗಿ ಓಡೋಡಿ ಬಂದು ಮೇಲಿಂದ ನೇರವಾಗಿ ಅಲಾಯಿ ಕೊಂಡದಲ್ಲಿ ಜಿಗಿಯುತ್ತಾರೆ. ನಂತರ ಕೈಯಲ್ಲಿ ಬೆಂಕಿಯನ್ನು ಹಿಡಿದು ಮೇಲಕ್ಕೆ ತೂರುತ್ತಾರೆ. ಈ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.