ಪುಲ್ವಾಮಾ ದಾಳಿ:ಸಚಿವ ಬಿ.ಸಿ.ಪಾಟೀಲ್ರಿಂದ ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪನಮನ - ಹಾವೇರಿ ಸುದ್ದಿ
ಹಾವೇರಿ ಜಿಲ್ಲೆ ಹಿರೇಕೆರೂರನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಹಿರೇಕೆರೂರು ಸರ್ವಜ್ಞ ವೃತ್ತಕ್ಕೆ ಆಗಮಿಸಿದ ಬಿ.ಸಿ.ಪಾಟೀಲ್ ಭಾರತಾಂಭೆ ಮತ್ತು ಸೈನಿಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪುಲ್ವಾಮಾ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಿ.ಸಿ.ಪಾಟೀಲ್ ಅಭಿಮಾನಿಗಳು ಉಪಸ್ಥಿತರಿದ್ದರು.