ಶಿವಮೊಗ್ಗದಲ್ಲಿರುವ ಏಷ್ಯಾದ ಎರಡನೇ ದೊಡ್ಡ ಚರ್ಚ್ನಲ್ಲಿ ಕ್ರಿಸ್ಮಸ್ ಸಂಭ್ರಮ: ಸಾಮೂಹಿಕ ಪ್ರಾರ್ಥನೆ - ಶಿವಮೊಗ್ಗದಲ್ಲಿ ಕ್ರಿಸ್ಮಸ್
ಶಿವಮೊಗ್ಗ: ಏಷ್ಯಾದ ಎರಡನೇ ದೊಡ್ಡ ಚರ್ಚ್ ಆದಂತಹ ಶಿವಮೊಗ್ಗದ ಸೆಕ್ರೆಟ್ ಹಾರ್ಟ್ ಚರ್ಚ್ನಲ್ಲಿ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸು ಕ್ರಿಸ್ತನ ಜನ್ಮ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಚರ್ಚ್ನಲ್ಲಿ ಶಿವಮೊಗ್ಗ ಪ್ರಾಂತ್ಯದ ಡಾ. ಪ್ರಾಸಿಸ್ಸ್ ಸರವೋ ಹಾಗೂ ಗಿಲ್ಬರ್ಟ್ ಅವರ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಿಸಲಾಯಿತು. ಕ್ರಿಸ್ಮಸ್ ಹಿನ್ನೆಲೆ ಚರ್ಚ್ನಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.