ಹಸುಗಳಿಗೆ ಆಶ್ರಯ ತಾಣ ಚಿಕ್ಕಮಗಳೂರಿನ ಕಾಮಧೇನು ಗೋಶಾಲೆ.. ಕರುಣಾಮಯಿ ಭಗವಾನ್ ಕಾರ್ಯಕ್ಕೆ ಸಲಾಂ - ಕಾಮಧೇನು ಗೋ ಶಾಲೆಯಲ್ಲಿ ಗೋವುಗಳ ರಕ್ಷಣೆ
ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಸಾಯಿಖಾನೆ ಪಾಲಾಗುತ್ತಿದ್ದ ಗೋವುಗಳನ್ನು ರಕ್ಷಿಸಿ ಪೋಷಿಸುವ ಕೆಲಸವನ್ನು ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಕಾಮಧೇನು ಗೋ ಶಾಲೆ ಮಾಡುತ್ತಿದೆ. ಸ್ವಂತ ಖರ್ಚಿನಲ್ಲಿ ಅವುಗಳ ಪಾಲನೆ ಮಾಡುತ್ತಿರುವ ಆ ಕರುಣಾಮಯಿ ಹೆಸರು ಭಗವಾನ್. ಅವರ ಈ ಮಾನವೀಯ ಕಾರ್ಯಕ್ಕೆ ಸಲಾಂ ಹೇಳಲೇಬೇಕು.