ಮಾರುಕಟ್ಟೆ ರೌಂಡಪ್: ಸಾರ್ವಕಾಲಿಕ ಗರಿಷ್ಠ ಏರಿಕೆಯ ಮರುದಿನವೇ ಅಲ್ಪ ಕುಸಿದ ಸೆನ್ಸೆಕ್ಸ್!
ಮುಂಬೈ: ಮಂಗಳವಾರದ ವಹಿವಾಟಿನ ದಿನದಂದು ದಾಖಲೆ ಏರಿಕೆಯ ನಂತರ ಹೂಡಿಕೆದಾರರು ಬ್ಯಾಂಕಿಂಗ್ ಮತ್ತು ಮೂಲಸೌಕರ್ಯ ಷೇರುಗಳಲ್ಲಿನ ಲಾಭದ ಬುಕಿಂಗ್‌ನಿಂದಾಗಿ ಬಿಎಸ್‌ಇ ಸೆನ್ಸೆಕ್ಸ್ ಬುಧವಾರ 37 ಅಂಕಗಳಷ್ಟು ಕುಸಿದು 44,618.04 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 4.70 ಅಂಕ ಏರಿಕೆಯಾಗಿ 13,113.75 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.