ಮಾರುಕಟ್ಟೆ ರೌಂಡಪ್: ಭಾರತ-ಚೀನಾ ಗಡಿ ಉದ್ವಿಗ್ನ ಪೇಟೆಯಲ್ಲಿ ಅಲ್ಲೋಲಕಲ್ಲೋಲ! - Market Roundup
ಲಡಾಖ್ನಲ್ಲಿ ಮತ್ತೆ ಚೀನಾ ಯೋಧರ ಪುಂಡಾಟ ಮುಂದುವರಿದಿದೆ. ಉಭಯ ದೇಶಗಳ ಸೇನಾ ಅಧಿಕಾರಿಗಳ ಸಭೆ ಬಳಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದ ಚೀನಾ ಈಗ ಮತ್ತೆ ಎಲ್ಎಸಿಯಲ್ಲಿ ಅತಿಕ್ರಮಣಕ್ಕೆ ಪ್ರಯತ್ನಿಸಿದೆ. ಇದು ಷೇರುಪೇಟೆಯು ಹೂಡಿಕೆದಾರರ ಮನೋಭಾವವದ ಮೇಲೆ ಪ್ರಭಾವ ಬೀರಿದೆ. ಸೋಮವಾರದ ವಹಿವಾಟಿನ ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 839.02 ಅಂಕ ಕುಸಿದು 38628.29 ಅಂಕಗಳ ಮಟ್ಟದಲ್ಲೂ ನಿಫ್ಟಿ 260.10 ಅಂಕ ಕುಸಿದು 11,387.50 ಅಂಕಗಳ ಮಟ್ಟದಲ್ಲೂ ಕೊನೆಗೊಂಡಿತು.