ನೋಟಾಕ್ಕೆ ನಮ್ಮ ಬೆಂಬಲವಿಲ್ಲ: ತೇಜಸ್ವಿನಿ ಅನಂತಕುಮಾರ್ ಸ್ಪಷ್ಟನೆ - undefined
ಬೆಂಗಳೂರು: ನೋಟಾಕ್ಕೆ ಮತ ಹಾಕಬೇಕು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಆ ರೀತಿ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದಕ್ಕೂ ತಮಗೂ ಯಾವುದೇ ರೀತಿಯ ಸಂಬಂಧ ಇಲ್ಲವೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಾನು ಅನಂತ್ ಕುಮಾರ್ ಪತ್ನಿ, ಕೊನೆ ಉಸಿರಿರುವವರೆಗೆ ಅನಂತ್ ಕುಮಾರ್ ಬಿಜೆಪಿಯಲ್ಲಿದ್ದವರು. ನನ್ನ ಪೂರ್ಣ ಬೆಂಬಲ ಜಿಜೆಪಿಗೆ. ಮೋದಿ ಮತ್ತೊಮ್ಮೆ ಎಂಬುದೇ ತಮ್ಮ ಧ್ಯೇಯ ಎಂದು ತೇಜಸ್ವಿನಿ ಸ್ಪಷ್ಟಪಡಿಸಿದರು.