ಇಲ್ಲಿ ದೇವರ ಪ್ರಸಾದ ಸೇವಿಸಲು ದಟ್ಟ ಕಾಡಿನಿಂದ ಬರುತ್ತವೆ ಕರಡಿಗಳು-VIDEO - ದೇವರ ಪ್ರಸಾದ ಸೇವಿಸುವ ಕರಡಿಗಳು
ಕರಡಿ ಅಂದ್ರೆ, ಅದೊಂದು ದುಷ್ಟ ಪ್ರಾಣಿ, ಜನರ ಮೇಲೆ ದಾಳಿ ಮಾಡುತ್ತದೆ ಎಂಬ ಭಯದ ಮನೋಭಾವ ಎಲ್ಲರದ್ದು. ಆದ್ರೆ ಈ ವಿಡಿಯೋದಲ್ಲಿರುವ ಕರಡಿಗಳ ವರ್ತನೆ ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸ್ನೇಹವನ್ನು ಬಿಂಬಿಸುತ್ತಿದೆ. ಒಡಿಶಾದ ನುವಾಪಾ ಜಿಲ್ಲೆಯ ದಟ್ಟವಾದ ಕಾಡಿನ ಬೆಟ್ಟಗಳ ಮೇಲಿರುವ ದೇವಾಲಯದ ಆವರಣದಲ್ಲಿ ಕರಡಿಗಳು ಸ್ಥಳೀಯರಿಂದ ಪ್ರಸಾದ ಸೇವಿಸುತ್ತವೆ. ಬೆಟ್ಟಗಳ ಮೇಲೆ ದೇವಾಲಯವಿದ್ದು, ಕರಡಿಗಳು ಪ್ರತಿದಿನ ದೇವಾಲಯದ ಆವರಣಕ್ಕೆ ಬರುತ್ತವೆ. ಜನರ ಮೇಲೆ ದಾಳಿ ಮಾಡದೆ, ಪ್ರಸಾದ ಸ್ವೀಕರಿಸಿ ತೆರಳುತ್ತವೆ.
Last Updated : Jan 30, 2021, 5:02 AM IST