ಜೆಎನ್ಯು ದಾಳಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ... ಪ್ರೊಟೆಸ್ಟ್ ವೇಳೆ 'ಫ್ರೀ ಕಾಶ್ಮೀರ' ಪೋಸ್ಟರ್! - ಪ್ರೊಟೆಸ್ಟ್ ವೇಳೆ 'ಫ್ರೀ ಕಾಶ್ಮೀರ' ಪೋಸ್ಟರ್
ಮುಂಬೈ: ದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಇದೀಗ ಉಗ್ರ ರೂಪ ಪಡೆದುಕೊಂಡಿದ್ದು, ದೇಶದ ಮೂಲೆ ಮೂಲೆಯಲ್ಲೂ ಘಟನೆ ಖಂಡಿಸಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಲಾಗ್ತಿದೆ. ಇದರ ಮಧ್ಯೆ ಮಹಾರಾಷ್ಟ್ರದ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಯುವತಿಯೋರ್ವಳು 'ಫ್ರೀ ಕಾಶ್ಮೀರ' ಎಂಬ ಬ್ಯಾನರ್ ಕೈಯಲ್ಲಿ ಹಿಡಿದುಕೊಂಡು ತನ್ನ ಆಕ್ರೋಶ ಹೊರಹಾಕಿದ್ದಾರೆ.