ಅಕ್ರಮವಾಗಿ ಕಟ್ಟಲಾದ ಬಹುಮಹಡಿ ಕಟ್ಟಡ ಕ್ಷಣಾರ್ಧದಲ್ಲಿ ನೆಲಸಮ: ವಿಡಿಯೋ
ಮಧ್ಯಪ್ರದೇಶ: ಇಂದೋರ್ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬಹುಮಹಡಿ ಕಟ್ಟಡವನ್ನು ಇಲ್ಲಿನ ಮಹಾನಗರ ಪಾಲಿಕೆ ಸ್ಫೋಟಕಗಳನ್ನು ಬಳಸಿ ನೆಲಸಮ ಮಾಡಿದೆ. ಇದಕ್ಕೂ ಮೊದಲು ಅಕ್ರಮವಾಗಿ ಕಟ್ಟಡ ಕಟ್ಟಲಾಗಿರುವ ಕುರಿತು ಕಟ್ಟಡಕ್ಕೆ ಸಂಬಂಧಪಟ್ಟವರಿಗೆ ಜಿಲ್ಲಾಡಳಿತವು ನೋಟಿಸ್ ನೀಡಿತ್ತು. ಆದರೆ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ಕಟ್ಟಡದ ಮಾಲೀಕ ವಿಫಲವಾದ ಕಾರಣ, ಸ್ಫೋಟಕ ತಜ್ಞ ಶರದ್ ಸರ್ವಾಟೆ ಎಂಬವರ ಸಹಾಯದೊಂದಿಗೆ ಪಾಲಿಕೆಯು ಬಹುಮಹಡಿ ಕಟ್ಟಡವನ್ನು ಕೆಡವಿದೆ.