ಕರ್ನಾಟಕ

karnataka

ETV Bharat / videos

6 ಗಂಟೆಯಲ್ಲಿ 50 ಕುರ್ಚಿ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ ವಿಶೇಷ ಚೇತನರು

By

Published : Dec 3, 2020, 10:14 AM IST

ಚೆನ್ನೈ: ಡಿಸೆಂಬರ್ 2 ರಂದು ಚೆನ್ನೈನಲ್ಲಿ ಕೇವಲ 6 ಗಂಟೆ ಕಾಲಾವಕಾಶದಲ್ಲಿ 50 ವಿಶೇಷ ಚೇತನ (ದೃಷ್ಟಿ ಸಮಸ್ಯೆ)ರು 50 ಕುರ್ಚಿಗಳನ್ನು ಮಾಡುವ ಮೂಲಕ ಯುನಿಕೋ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂದಹಾಗೆ ಇವರೆಲ್ಲರೂ ಬಾಲ್ಯದಿಂದಲೂ ನೇಯ್ಗೆ ಮಾಡಿ ಕುರ್ಚಿ ತಯಾರಿಸುವುದನ್ನು ಕಲಿಯುತ್ತಿದ್ದಾರೆ. ಯುನಿಕೊ ಚಾರಿಟೇಬಲ್ ಟ್ರಸ್ಟ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಲೈಂಡ್ ವೆಲ್ಫೇರ್ ಟ್ರಸ್ಟ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿಶೇಷ ಚೇತನರ ಸಾಮರ್ಥ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂಗವೈಕಲ್ಯತೆ ಕುರಿತು ಅರಿವು ಮೂಡಿಸುವ ಸಲುವಾಗಿ ಡಿ. 3ರಂದು(ಇಂದು) ವಿಶ್ವ ವಿಕಲಚೇತನ ದಿನ ಆಚರಿಸಲಾಗುತ್ತದೆ. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬುದೇ ಇದರ ಉದ್ದೇಶ.

ABOUT THE AUTHOR

...view details