ಹೆಣ್ಣು -ಗಂಡು ಹುಲಿಗಳ ನಡುವೆ ಭೀಕರ ಕಾಳಗ... ವಿಡಿಯೋ ವೈರಲ್ - ಜೈವಿಕ ಉದ್ಯಾನದಲ್ಲಿ ಹುಲಿಗಳ ಕಾದಾಟ
ಉದಯಪುರ್(ರಾಜಸ್ಥಾನ): ಇಲ್ಲಿನ ಸಜ್ಜಂಗರ್ ಜೈವಿಕ ಉದ್ಯಾನದಲ್ಲಿ 12 ವರ್ಷದ ಗಂಡು ಹುಲಿ(ಕುಮಾರ್) ಹಾಗೂ 15 ವರ್ಷದ ಹೆಣ್ಣು(ದಾಮಿನಿ) ಹುಲಿ ನಡುವೆ ಭೀಕರ ಕಾಳಗ ನಡೆದು, ಸ್ಥಳದಲ್ಲೇ 12 ವರ್ಷದ ಟೈಗರ್ ಮೃತಪಟ್ಟಿರುವ ಘಟನೆ ನಡೆದಿದೆ. ಎರಡು ಟೈಗರ್ ನಡುವೆ ಭೀಕರ ಕಾಳಗ ನಡೆಯುತ್ತಿದ್ದರೂ ಅವುಗಳ ರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದು, ಇದೀಗ ಅದರ ವಿಡಿಯೋ ವೈರಲ್ ಆಗಿದೆ.