ಕಂಟೇನರ್ - ಟ್ರ್ಯಾಕ್ಟರ್ ಡಿಕ್ಕಿ: ಇಬ್ಬರ ಸಜೀವ ದಹನ - ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ
ಅಜ್ಮೇರ್ (ರಾಜಸ್ಥಾನ): ಕಂಟೇನರ್ ಹಾಗೂ ಟ್ರ್ಯಾಕ್ಟರ್ ಡಿಕ್ಕಿಯಾದ ಪರಿಣಾಮ ಬೆಂಕಿ ಹತ್ತಿಕೊಂಡಿದ್ದು, ಘಟನೆಯಲ್ಲಿ ಕಂಟೇನರ್ ಚಾಲಕ ಮತ್ತು ಕ್ಲೀನರ್ ಸುಟ್ಟು ಭಸ್ಮವಾಗಿದ್ದಾರೆ. ರಾಜಸ್ಥಾನದ ಅಜ್ಮೇರ್ನಲ್ಲಿ ತಡರಾತ್ರಿ ದುರಂತ ಸಂಭವಿಸಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.