ಕರ್ನಾಟಕ

karnataka

ETV Bharat / videos

ಕಬ್ಬು ಕಡಿಯುವ ವೇಳೆ ಮೂರು ಚಿರತೆ ಮರಿಗಳು ಪತ್ತೆ..! - leopard cubs at Pune

By

Published : Jan 24, 2022, 7:53 PM IST

ಪುಣೆ (ಮಹಾರಾಷ್ಟ್ರ): ಪುಣೆ ಜಿಲ್ಲೆಯ ಹಿಂಜೇವಾಡಿ ಎಂಬಲ್ಲಿ ತಮ್ಮ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ರೈತನೋರ್ವನಿಗೆ ಮೂರು ಚಿರತೆ ಮರಿಗಳು ಸಿಕ್ಕಿವೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಮೂರೂ ಮರಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ. 15 ದಿನಗಳಿಂದ ಒಂದು ತಿಂಗಳ ಪ್ರಾಯದ ಮರಿಗಳು ಇವಾಗಿವೆ. ಈ ಪೈಕಿ ಎರಡು ಮರಿಗಳು ತಾಯಿಯಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಅದೇ ಜಾಗದಲ್ಲಿ ತಾಯಿ ಬಂದು ಎತ್ತಿಕೊಂಡು ಹೋಗಲು ಎರಡು ಮರಿಗಳನ್ನು ಬಿಡಲಾಗಿದೆ.

ABOUT THE AUTHOR

...view details