ಪ್ರವಾಹಕ್ಕೆ ತೇಲಿ ಹೋದ ಸ್ವಿಫ್ಟ್ ಕಾರು... ಸೀಟ್ ಬೆಲ್ಟ್ ಕಟ್ಟಿದ್ದೇ ಚಾಲಕನಿಗೆ ಮುಳುವಾಯ್ತು! - ಸೋಲಾಪುರ ನದಿಯಲ್ಲಿ ಸ್ವಿಫ್ಟ್ ಕಾರು
ಸೋಲಾಪುರ್: ಕಳೆದ ಮೂರು ದಿನಗಳಿಂದ ವಿವಿಧ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸೋಲಾಪುರದ ನದಿಯಲ್ಲಿ ಸ್ವಿಫ್ಟ್ ಕಾರ್ವೊಂದು ಪತ್ತೆಯಾಗಿದ್ದು, ಚಾಲಕ ಅದರಲ್ಲೇ ಸಾವನ್ನಪ್ಪಿದ್ದಾನೆ. ನೀರಿನ ಪ್ರವಾಹ ಏಕಾಏಕಿ ಹೆಚ್ಚಿಗೆ ಆಗಿರುವ ಕಾರಣ ಹಾಗೂ ಸೀಟ್ ಬೆಲ್ಟ್ ಹಾಕಿದ್ದ ಕಾರಣ ಆತನಿಗೆ ಹೊರಗಡೆ ಬರಲು ಸಾಧ್ಯವಾಗಿಲ್ಲ. ಸ್ವಿಫ್ಟ್ ಕಾರು ನದಿಯಲ್ಲಿ ಮುಳುಗಿರುವುದನ್ನ ನೋಡಿರುವ ಗ್ರಾಮಸ್ಥರು ಹೊರ ತೆಗೆದಿದ್ದಾರೆ. ಆದರೆ ಚಾಲಕ ಸಾವನ್ನಪ್ಪಿದ್ದಾನೆ. ಇದರಲ್ಲಿ ಮತ್ತಿಬ್ಬರು ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರೆದಿದೆ.