ಮಕರ ಸಂಕ್ರಾಂತಿ ಅಂಗವಾಗಿ ಗಂಗಾ ಸಾಗರದಲ್ಲಿ ಮಿಂದೆದ್ದ ಯಾತ್ರಿಕರು
ಪಶ್ಚಿಮ ಬಂಗಾಳ: ಮಕರ ಸಂಕ್ರಮಣ ಹಬ್ಬದ ಅಂಗವಾಗಿ ಸಕಲ ಸಂಕಷ್ಟ ನಿವಾರಣೆಗಾಗಿ ಯಾತ್ರಿಕರು ಇಂದು ಗಂಗಾ ಸಾಗರದಲ್ಲಿ ಮಿಂದೆದ್ದರು. ಸಾವಿರಕ್ಕೂ ಅಧಿಕ ಭಕ್ತಾದಿಗಳು ಗಂಗಾ ಸಾಗರದಲ್ಲಿ ಸ್ನಾನಕ್ಕೆಂದು ಆಗಮಿಸಿದ್ದು, ಮೂಂಜಾಗ್ರತಾ ಕ್ರಮವಾಗಿ 10,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.