ಪಾಕ್ನಲ್ಲಿ ಹಿಂದೂಗಳಿಗಿಲ್ವಂತೆ ರೇಷನ್... ಇಬ್ಬಗೆ ನೀತಿ ಅನುಸರಿಸುತ್ತಿದೆಯಾ ಇಮ್ರಾನ್ ಸರ್ಕಾರ? - ಪಾಕಿಸ್ತಾನ
ಸಿಂಧ್ ಪ್ರಾಂತ್ಯ(ಪಾಕಿಸ್ತಾನ): ಕೊರೊನಾ ವೈರಸ್ ಜನಸಾಮಾನ್ಯರ ಜೀವನದಲ್ಲಿ ತಲ್ಲಣ ಉಂಟು ಮಾಡಿದೆ. ಒಂದು ಹೊತ್ತಿನ ಊಟಕ್ಕೂ ಅವರ ತೊಂದರೆ ಅನುಭವಿಸುವಂತಾಗಿದೆ. ಇದರ ಮಧ್ಯೆ ನೆರೆಯ ಪಾಕ್ನಲ್ಲಿ ಅಲ್ಪಸಂಖ್ಯಾತ ಸಮುದಾಯ ಹಿಂದೂ ಹಾಗೂ ಕ್ರಿಶ್ಚಿಯನ್ರೊಂದಿಗೆ ಇಬ್ಬಗೆಯ ನೀತಿ ಅನುಸರಣೆ ಮಾಡಲಾಗುತ್ತಿದೆ. ಪಾಕ್ನ ಸಿಂಧ್ ಪ್ರಾಂತ್ಯದಲ್ಲಿ ಲಾಕ್ಡೌನ್ ವೇಳೆ ಪಡಿತರ ನೀಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮಾಧ್ಯಮದ ಮುಂದೆ ಇಲ್ಲಿನ ವ್ಯಕ್ತಿಯೋರ್ವ ಗೋಳು ಹೇಳಿಕೊಂಡಿದ್ದಾರೆ.