ರಾಜ್ಯಸಭೆಯಲ್ಲಿ ಕೃಷಿ ಕಾನೂನುಗಳ ಚರ್ಚೆಗೆ ಸಿಗದ ಅವಕಾಶ: ವಿಪಕ್ಷಗಳಿಂದ ಸಭಾತ್ಯಾಗ - ಸಭಾಧ್ಯಕ್ಷ ವೆಂಕಯ್ಯನಾಯ್ಡು
ಇಂದಿನ ಎಲ್ಲಾ ಚರ್ಚೆಗಳನ್ನು ರದ್ದುಪಡಿಸಿ, ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ರಾಜ್ಯಸಭೆಯಲ್ಲಿ ಸಭಾಧ್ಯಕ್ಷರಿಗೆ ವಿಪಕ್ಷಗಳು ಒತ್ತಾಯಿಸಿದವು. ಇದಕ್ಕೆ ಸಭಾಧ್ಯಕ್ಷರಾದ ವೆಂಕಯ್ಯನಾಯ್ಡು ಅವರು ಅವಕಾಶ ಮಾಡಿಕೊಡಲಿಲ್ಲ. ಹಾಗಾಗಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸಂಸದರು ಸಭಾತ್ಯಾಗ ಮಾಡಿದರು. ಇದರಿಂದಾಗಿ, ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 12:30ಕ್ಕೆ ಮುಂದೂಡಿದರು. 267ರ ನಿಯಮದ ಪ್ರಕಾರ ಇಂದಿನ ಕಲಾಪ ರದ್ದುಪಡಿಸಿ, ಕೃಷಿ ಕಾಯ್ದೆ ಸಂಬಂಧ ಚರ್ಚಿಸುವಂತೆ ವಿಪಕ್ಷಗಳು ನೋಟಿಸ್ ನೀಡಿದ್ದವು.