20 ಕಿಲೋ ಮೀ. ನಡೆದು ಹೋಗಿ ಜನರಿಗೆ ಅಗತ್ಯ ವಸ್ತು ಪೂರೈಸುವ ಶಾಸಕಿ ಸೀತಕ್ಕ! - ದೇಶಾದ್ಯಂತ ಲಾಕ್ಡೌನ್
ಮುಲುಗು(ತೆಲಂಗಾಣ): ದೇಶಾದ್ಯಂತ ಲಾಕ್ಡೌನ್ ಹೇರಿಕೆ ಮಾಡಿರುವ ಕಾರಣ ಜನಸಾಮಾನ್ಯರು ಅನೇಕ ರೀತಿಯ ತೊಂದರೆ ಅನುಭವಿಸ್ತಿದ್ದಾರೆ. ಇದರ ಮಧ್ಯೆ ತೆಲಂಗಾಣ ಮುಲುಗು ಕ್ಷೇತ್ರದ ಶಾಸಕಿ ಸೀತಕ್ಕ ಪ್ರತಿದಿನ 20 ಕಿಲೋ.ಮೀ. ನಡೆದು ಹೋಗಿ ಜನರಿಗೆ ಅಗತ್ಯ ವಸ್ತು ಪೂರೈಕೆ ಮಾಡ್ತಿದ್ದಾರೆ. ಬುಡಕಟ್ಟು ಜನಾಂಗದವರಿಗೆ ಎಲ್ಲ ರೀತಿಯ ಅಗತ್ಯವಸ್ತು ತಲುಪಿಸುತ್ತಿರುವ ಇವರು ಈ ಹಿಂದೆ ಮಾಜಿ ನಕ್ಸಲ್ ಆಗಿದ್ದರು ಎಂಬುದು ಗಮನಾರ್ಹ ಸಂಗತಿ.