ಧರೆಗಿಳಿದು ಬರುತ್ತಿರುವ ಗಂಗೆ... ಭೂಸ್ವರ್ಗ ನೋಡಲು ಬಂದ 23 ಸಾವಿರಕ್ಕೂ ಹೆಚ್ಚು ಪ್ರಕೃತಿ ಪ್ರಿಯರು! - ರಾಜಸ್ಥಾನದ ಸಿರೋಹಿಯಲ್ಲಿರುವ ಮೌಂಟ್ ಅಬು,
ಎತ್ತ ನೋಡಿದ್ರೂ ಹಚ್ಚ ಹಸಿರು. ಭೂಮಿಗಿಳಿದು ಬರುತ್ತಿರುವ ಗಂಗೆ. 16.6 ಡಿಗ್ರಿ ತಾಪಮಾನ. ಬೆಟ್ಟ-ಗುಡ್ಡಗಳ ನಾಡು. ಈ ಸುಂದರ ತಾಣವನ್ನು ನೋಡಲು ಜನ ಸಾಗರವೇ ಇಲ್ಲಿಗೆ ತೆರಳಿ ಬರುತ್ತೆ. ಹೌದು, ಇದು ಬೇರೆ ಯಾವ ಸ್ಥಳವಲ್ಲ ಭೂ ಸ್ವರ್ಗ ಎಂದೇ ಖ್ಯಾತಿ ಹೊಂದಿರುವ ಮೌಂಟ್ ಅಬು. ರಾಜಸ್ಥಾನದ ಸಿರೋಹಿ ಮತ್ತು ಗುಜರಾತ್ ಗಡಿ ಭಾಗದಿಂದ 58 ಕಿ.ಮೀ ದೂರದಲ್ಲಿ ಈ ಭವ್ಯ ತಾಣವನ್ನು ಕಾಣಬಹುದಾಗಿದೆ. ಬೆಂಗಳೂರಿನಿಂದ ಸುಮಾರು 1,800 ಕಿಲೋ ಮೀಟರ್ ದೂರದಲ್ಲಿರುವ ಮೌಂಟ್ ಅಬು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಪ್ರಮುಖ ಕೇಂದ್ರವೂ ಹೌದು. ಗುಜರಾತಿನ ಅಹಮದಾಬಾದ್‌ನಿಂದ ಸುಮಾರು 225 ಕಿಲೋ ಮೀಟರ್ ದೂರದಲ್ಲಿದೆ. ಅಬು ರಸ್ತೆಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿ ತೆರಳಬೇಕಾದಾಗ ಸುಂದರ ಪ್ರಕೃತಿ, ಜಲಪಾತಗಳು ಮನ ಸೆಳೆಯುತ್ತವೆ. ಈ ಪ್ರಕೃತಿ ಸೌಂದರ್ಯವನ್ನು ಸವಿಯಲು ಸುಮಾರು 23 ಸಾವಿರಕ್ಕೂ ಹೆಚ್ಚು ಜನರು ಮೌಂಟ್ ಅಬುವನ್ನು ತಲುಪಿದ್ದಾರೆ.