ಮೃಗಾಲಯದಲ್ಲಿ ಹಗಲಿನಲ್ಲೇ ರಾತ್ರಿಯ ವಾತಾವರಣ.... ಇದಕ್ಕೆ ಮಾಡ್ತಿರೋ ವೆಚ್ಚ ಎಷ್ಟು ಗೊತ್ತೇ?
ದೇಶದಲ್ಲಿ ಪ್ರಪ್ರಥಮ ಬಾರಿಗೆ ರಾತ್ರಿಯೂ ಮೃಗಾಲಯದ ಬಾಗಿಲು ಓಪನ್ ಮಾಡಿಡಲಾಗಿದೆ. ರಾತ್ರಿ ವೇಳೆ ಮೃಗಾಲಯ ಓಪನ್ ಆಗಿರುವುದು ಎಂದರೆ ನೈಟ್ ಸಹ ಇಲ್ಲಿ ಪ್ರವಾಸಿಗರಿಗೆ ಎಂಟ್ರಿ ಎಂದು ಅರ್ಥವಲ್ಲ. ಹಗಲಲ್ಲೇ ರಾತ್ರಿ ವಾತಾವರಣ ಸೃಷ್ಟಿ ಮಾಡುವುದೇ ಈ ಮೃಗಾಲಯದ ವಿಶೇಷ. ಹೀಗೊಂದು ಮೃಗಾಲಯ ನಿರ್ಮಿಸಲು ಕಾರಣವೂ ಇದೆ. ಏಕಂದ್ರೆ ಕತ್ತಲ್ಲಲ್ಲಿ ಎಚ್ಚರವಾಗಿರುವ ಗೂಬೆ, ಬಾವಲಿ, ಮುಳ್ಳಹಂದಿ, ಕಾಡು ಬೆಕ್ಕು, ಕಾಡು ಇಲಿ, ಕತ್ತೆಕಿರುಬ ಹೀಗೆ ಮುಂತಾದ ಜೀವಿಗಳನ್ನು ಈ ಮೃಗಾಲಯದಲ್ಲಿ ಆ್ಯಕ್ಟಿವ್ ಆಗಿರುವಂತೆ ಪ್ರವಾಸಿಗರಿಗೆ ತೋರಿಸುವುದೇ ಇದರ ಮೂಲ ಉದ್ದೇಶ. ಇನ್ನು ಈ ಮೃಗಾಲಯ ಇರುವುದು ಗುಜರಾತ್ನ ಅಹಮದಾಬಾದ್ನಲ್ಲಿ. 17 ಕೋಟಿಯಲ್ಲಿ ನಿರ್ಮಿಸಿರುವ ಈ ಮೃಗಾಲಯಕ್ಕೆ ಪ್ರತಿ ವರ್ಷ ಮೂರು ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ.