ಕರ್ನಾಟಕ

karnataka

ETV Bharat / videos

'ರಕ್ಷಿತಾ'- ಬೈಕ್​​ ಆ್ಯಂಬುಲೆನ್ಸ್​​​​​​​​ಗೆ ಚಾಲನೆ; ಭದ್ರತಾ ಸಿಬ್ಬಂದಿಗೆ ಸಹಾಯ ಹಸ್ತ

By

Published : Jan 19, 2021, 6:55 AM IST

ನವದೆಹಲಿ: ಸಿಆರ್‌ಪಿಎಫ್ ಮತ್ತು ಡಿಆರ್‌ಡಿಒ ಸೋಮವಾರದಂದು ವಿಶೇಷವಾಗಿ ಅಭಿವೃದ್ಧಿಪಡಿಸಿದ 'ರಕ್ಷಿತಾ' - ಬೈಕ್​​ ಆಂಬ್ಯುಲೆನ್ಸ್ ಗೆ ಚಾಲನೆ ನೀಡಿದೆ. ಭದ್ರತಾ ಸಿಬ್ಬಂದಿಗೆ ತೊಂದರೆಯಾದಲ್ಲಿ, ತುರ್ತು ಸಂದರ್ಭ ಒದಗಿಬಂದಲ್ಲಿ ಈ ಬೈಕ್​​ ಆ್ಯಂಬುಲೆನ್ಸ್​​ಗಳು ಸಹಾಯ ನೀಡಲಿವೆ. ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾನಿರ್ದೇಶಕ ಎಪಿ ಮಹೇಶ್ವರಿ ಎಎನ್‌ಐಯೊಂದಿಗೆ ಮಾತನಾಡಿ, ಈ ಬೈಕ್​​​​​ಗಳು ಬಿಜಾಪುರ, ಸುಕ್ಮಾ, ದಂತೇವಾಡ ಮುಂತಾದ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವಾಗಲಿವೆ. ಆ ಅರಣ್ಯ ಪ್ರದೇಶಗಳಲ್ಲಿ ದೊಡ್ಡ ವಾಹನಗಳು ಅಥವಾ ಆ್ಯಂಬುಲೆನ್ಸ್​​ಗಳನ್ನು ಕೊಂಡೊಯ್ಯುವುದು ಒಂದು ಸವಾಲಾಗಿರುವುದರಿಂದ, ಈ ಬೈಕ್​​ಗಳು ಅಂತಹ ಸ್ಥಳಗಳಲ್ಲಿ ಹೆಚ್ಚು ಸಹಕಾರ ನೀಡಲಿವೆ ಎಂದರು. ಇಂತಹ ಬೈಕುಗಳು ನಕ್ಸಲೈಟ್ ವಲಯಗಳಲ್ಲಿ, ಕಿರಿದಾದ ರಸ್ತೆಗಳಲ್ಲಿ ವೇಗವಾಗಿ ತಲುಪುದನ್ನು ಸಿಆರ್‌ಪಿಎಫ್ ಗಮನಿಸಿದ ನಂತರ ಬೈಕನ್ನು ಅಭಿವೃದ್ಧಿಪಡಿಸಲಾಗಿದೆಯೆಂದರು.

ABOUT THE AUTHOR

...view details