ರಾಕೇಶ್ ಟಿಕಾಯತ್ಗೆ ಕಪ್ಪು ಧ್ವಜ ತೋರಿಸಿ, ಕಾರಿನ ಮೇಲೆ ದಾಳಿ ನಡೆಸಿದ್ದ 14 ಯುವಕರ ಬಂಧನ - BKU
ಅಲ್ವಾರ್(ರಾಜಸ್ಥಾನ): ನಿನ್ನೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ಗೆ ಕಪ್ಪು ಧ್ವಜ ತೋರಿಸಿದ್ದ ಹಾಗೂ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದ 14 ಮಂದಿ ಯುವಕರನ್ನು ರಾಜಸ್ಥಾನದ ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ. ಎಬಿವಿಪಿ ಕಾರ್ಯಕರ್ತ ಕುಲದೀಪ್ ಯಾದವ್ ಪ್ರಮುಖ ಆರೋಪಿಯಾಗಿದ್ದು, ಎಲ್ಲ ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.