ಮಧ್ಯರಾತ್ರಿ ಆಟೋ ರಿಕ್ಷಾ ಕದ್ದು ಎಸ್ಕೇಪ್.. ಖತರ್ನಾಕ್ ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ - ಖತರ್ನಾಕ್ ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು: ಮಧ್ಯರಾತ್ರಿ ಆಟೋ ರಿಕ್ಷಾ ಕದ್ದು ಎಸ್ಕೇಪ್ ಆಗಿರುವ ಖತರ್ನಾಕ್ ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೊಟ್ಟೆಪಾಡಿಗಾಗಿ ಬಾಡಿಗೆ ಆಟೋ ಓಡಿಸುತ್ತಿದ್ದ ಪುಟ್ಟಸ್ವಾಮಿ ಆಟೋ ಕಳೆದುಕೊಂಡ ವ್ಯಕ್ತಿ. ಮಾರ್ಚ್ 17 ರಂದು ಕೆಲಸ ಮುಗಿಸಿಕೊಂಡು ಪುಟ್ಟಸ್ವಾಮಿ ರಾತ್ರಿ ಮನೆಯ ಮುಂದೆ ಆಟೋ ನಿಲ್ಲಿಸಿದ್ದರು. ಅದೇ ರಾತ್ರಿ ಆಟೋವನ್ನು ಕಳ್ಳ ಕದ್ದು ಎಸ್ಕೇಪ್ ಆಗಿದ್ದಾನೆ. ಬೆಳಗ್ಗೆ ಎದ್ದು ನೋಡಿದಾಗ ಆಟೋ ರಿಕ್ಷಾ ಕಳ್ಳತನವಾಗಿರುವುದು ಗೊತ್ತಾಗಿದೆ. ಸದ್ಯ ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಸಿಬ್ಬಂದಿ ಆರೋಪಿಗಾಗಿ ಬಲೆ ಬೀಸಿದ್ದಾರೆ.
Last Updated : Feb 3, 2023, 8:21 PM IST